Kannada NewsKarnataka NewsLatest

*ಕಾರು ರಿವರ್ಸ್ ತೆಗುವಾಗ ದುರಂತ: ಕಾರಿನ ಚಕ್ರದಡಿ ಸಿಲುಕಿ ಒಂದೂವರೆ ವರ್ಷದ ಮಗು ಸಾವು*

ಪ್ರಗತಿವಾಹಿನಿ ಸುದ್ದಿ: ಕಾರು ರಿವರ್ಸ್ ತೆಗೆಯುವಾಗ ಒಂದೂವರೆ ವರ್ಷದ ಮಗುವಿನ ಮೇಲೆ ಕಾರು ಹರಿದು ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಾದನಾಯಕನಹಳ್ಳಿಯ ತೋಟದ ಗುಡ್ದದಹಳ್ಳಿಯ ಬೆನಕ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಮೋಹನ್ ಎಂಬುವವರ ಮಗ ನೂತನ್ ಮೃತ ಮಗು. ಮೋಹನ್ ಅವರ ಅಕ್ಕ-ಭಾವ ನಿನ್ನೆ ಕಾರಿನಲ್ಲಿ ಮನೆಗೆ ಬಂದಿದ್ದರು. ಇಂದು ಮಗು ಕಾರಿನ ಪಕ್ಕದಲ್ಲಿಯೇ ಆಟವಾಡುತ್ತಿದ್ದಾಗ ಕಾರು ಚಾಲಕ ಮಗುವನ್ನು ಗಮನಿಸದೇ ಏಕಾಏಕಿ ಕಾರು ರಿವರ್ಸ್ ತೆಗೆದಿದ್ದಾನೆ.

ಕಾರಿನ ಚಕ್ರದಡಿ ಸಿಲುಕಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಕಂದಮ್ಮನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Home add -Advt

Related Articles

Back to top button