Kannada NewsLatest

ಪುರಾತನ ಸಂಸ್ಕೃತಿಯನ್ನು ಉಳಿಸುವದು ಅಗತ್ಯ

ಪುರಾತನ ಸಂಸ್ಕೃತಿಯನ್ನು ಉಳಿಸುವದು ಅಗತ್ಯ

ಪ್ರಗತಿವಾಹಿನಿ ಸುದ್ದಿ – ಹುಕ್ಕೇರಿ : ವೈಜ್ಞಾನಿಕ ಯುಗದಲ್ಲಿ ನಮ್ಮ ಹಳೆಯ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆ ನಾವು ವಾಲುತ್ತಿದ್ದೇವೆ. ಬರುವ ಪೀಳಿಗೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸಬೇಕಾದ ಅನಿವಾರ್ಯತೆ ಇದೆ ಎಂದು ಸಾಹಿತಿ ಹಾಗೂ ಆಧ್ಯಾತ್ಮಿಕ ಚಿಂತಕರಾದ ಚಿದಂಬರ ದೇಶಪಾಂಡೆ ಅಭಿಪ್ರಾಯಪಟ್ಟರು.

ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ ಆಯೋಜಿಸಿದ ಮಹಿಳಾ ಸಂಘದ ಸದಸ್ಯರ  ಭಜನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಭ್ರ‍್ಮರಾಂಬಿಕಾ ಭಜನಾ ಸಂಘದ ಅಧ್ಯಕ್ಷೆ ಶ್ರೀಮತಿ ಹೇಮಾ ಉದೋಶಿ ಮಾತನಾಡಿ ಮಹಿಳೆ ಸಂಸ್ಕೃತಿಯ ನಿರಂತರತೆ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾಳೆ. ಮಕ್ಕಳಿಗೆ ಜ್ಞಾನದ ಜೂತೆಗೆ ನಮ್ಮ ಸಂಪ್ರದಾಯವನ್ನು ಕಲಿಸುವ ಕೆಲಸವನ್ನು ತಾಯಂದಿರು ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಕವಿತಾ ಪಟ್ಟಣಶೆಟ್ಟಿ, ಗಂಗಾಭಿಕಾ ಅಂಬಿಗೇರ, ದುರ್ಗಾ ಭಜನಾ ಮಂಡಳದ ಸದಸ್ಯರು  ಉಪಸ್ಥಿತರಿದ್ದರು. ಬಾನುಲಿ ಕೇಂದ್ರದ ಸಂಚಾಲಕ ಅಕ್ಷಯ ಘೋರ್ಪಡೆ, ಬಸವರಾಜ ಎಲಿಬಳ್ಳಿ ಉಪಸ್ಥಿತರಿದ್ದರು.////

 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button