ಪ್ರಗತಿವಾಹಿನಿ ಸುದ್ದಿ, ತಿರುವನಂತನಪುರಂ: ನಗ್ನತೆಯನ್ನು ಲೈಂಗಿಕತೆಗೆ ಹೋಲಿಸುವುದು ಸರಿಯಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಮಹಿಳಾ ಹಕ್ಕುಗಳ ಕಾರ್ಯಕರ್ತೆ ರೆಹಾನಾ ಫಾತಿಮಾ ವಿರುದ್ಧದ ಪೋಕ್ಸೋ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.
ಮಹಿಳೆ ತನ್ನ ದೇಹದ ಕುರಿತು ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರಳು. ಅದು ಆಕೆಯ ಸಮಾನತೆ ಹಾಗೂ ಖಾಸಗಿತನದ ಮೂಲಭೂತ ಹಕ್ಕು. ನಗ್ನತೆ ಹಾಗೂ ಲೈಂಗಿಕತೆಯನ್ನು ಹೋಲಿಕೆ ಮಾಡಲಾಗದು ಎಂದು ಕೋರ್ಟ್ ಹೇಳಿದೆ.
ರೆಹಾನಾ ಫಾತಿಮಾ ಅವರ ವಿರುದ್ಧ ವಿರುದ್ಧದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 (ಪೋಕ್ಸೊ), ಮಾಹಿತಿ ತಂತ್ರಜ್ಞಾನ ಕಾಯಿದೆ, ಮಕ್ಕಳ ರಕ್ಷಣೆ ಕಾಯಿದೆ, 2015 (ಜೆಜೆ ಕಾಯಿದೆ), 2000 ರ ಕಲಂ67 ಬಿ (ಡಿ) ಮತ್ತು ಬಾಲಾಪರಾಧಿ ನ್ಯಾಯದ (ಕೇರ್ ಮತ್ತು ಸೆಕ್ಷನ್ 75) ಕಲಂ 13, 14 ಮತ್ತು 15 ರ ಅಡಿ ಅಪರಾಧಗಳಿಗಾಗಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಅರೆನಗ್ನ ಚಿತ್ರ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರ ಕುರಿತು ರೆಹಾನಾ ಫಾತಿಮಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಈ ವಿಷಯದಲ್ಲಿ ಯಾವುದೇ ದುರುದ್ದೇಶ ಕಾಣುತ್ತಿಲ್ಲ. ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನ ಇದಾಗಿದ್ದು, ನಗ್ನ ದೇಹವನ್ನು ಸಹಜ ದೃಷ್ಟಿಯಿಂದ ನೋಡಲು ಮತ್ತು ಅದರ ಬಗ್ಗೆ ಸಂವೇದನಾಶೀಲರಾಗಲು ತಾಯಿ ತನ್ನ ದೇಹವನ್ನು ತನ್ನ ಮಕ್ಕಳಿಗೆ ಕ್ಯಾನ್ವಾಸ್‌ನಂತೆ ಪೇಟಿಂಗ್ ಮಾಡಲು ಅನುಮತಿ ನೀಡಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ಹೈಕೋರ್ಟ್ ಹೇಳಿದೆ.
ಪುರುಷರು ತಮ್ಮ ದೇಹದ ಮೇಲ್ಭಾಗವನ್ನು ಪ್ರದರ್ಶಿಸುವುದು ನಗ್ನತೆಯಾಗಿ ಕಾಣುವುದಿಲ್ಲ. ಅದೇ ಮಹಿಳೆಯ ವಿಚಾರದಲ್ಲಿ ಇದು ವಿರುದ್ಧವಾಗಿದೆ. ಪ್ರತಿಯೊಬ್ಬರೂ ತನ್ನ ದೇಹದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಂವಿಧಾನದಲ್ಲಿಯೇ ಅವಕಾಶ ಇರುವುದರಿಂದ ದ್ವಿಮುಖ ನೀತಿ ಸರಿಯಲ್ಲ. ಪುರಾತನ ದೇಗುಲಗಳಲ್ಲಿ ನಗ್ನ ಶಿಲ್ಪಗಳ ಕೆತ್ತನೆ ಮಾಡಿದ್ದನ್ನು ಯಾರೂ ಲೈಂಗಿಕತೆ ದೃಷ್ಟಿಯಿಂದ ನೋಡುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ರೆಹಾನಾ 2020ರ ಜೂನ್ 19ರಂದು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ‘ಬಾಡಿ ಆರ್ಟ್ಸ್ ಪಾಲಿಟಿಕ್ಸ್ (#BodyArtPolitics)’ ಎಂಬ ಶೀರ್ಷಿಕೆಯಡಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ರೆಹನಾ ತನ್ನ ಮಗ ಹಾಗೂ ಮಗಳ ಕೈಯಿಂದ ಅರೆಬೆತ್ತಲೆ ದೇಹದ ಮೇಲೆ ಚಿತ್ರ ಬಿಡಿಸಿಕೊಳ್ಳುತ್ತಿರುವ ದೃಶ್ಯವಿತ್ತು.
ಸಮಾಜದಲ್ಲಿ ಮಹಿಳೆಯರು ಲೈಂಗಿಕತೆ ಮತ್ತು ಅವರ ದೇಹದ ಬಗ್ಗೆ ಮುಕ್ತವಾಗಿರಬೇಕು ಎಂಬುದನ್ನು ಸಾರಲು ಈ ವಿಡಿಯೊ ಮಾಡಿದ್ದಾಗಿ ರೆಹಾನಾ ಸಮರ್ಥಿಸಿಕೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ