
ಪ್ರಗತಿವಾಹಿನಿ ಸುದ್ದಿ : ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ನಿಜ. ಅದನ್ನು ಮಾರ್ಗದರ್ಶಕರಾಗಿರುವ ಪ್ರಲ್ಲಾದ್ ಜೋಷಿಯವರು ಬಗೆಹರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದು ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ. ನಾನೂ ಕೂಡಾ ಹಿಂದಿನ ಸಭೆಯಲ್ಲಿ ಅವರಿಗೆ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಲು ಮನವಿ ಮಾಡಿದ್ದೆ. ಜಿಲ್ಲೆಗಳಲ್ಲಿನ ಸಮಸ್ಯೆಗಳ ಬಗ್ಗೆಯೂ ಸಹ ನಾವು ಚರ್ಚಿಸಲಿದ್ದೇವೆ ಎಂದರು.
ರವಿಕುಮಾರ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರವಿಕುಮಾರ್ ಅವ್ರು ಅವರ ಹೇಳಿಕೆಗೆ ಸ್ಪಷ್ಟಿಕರಣ ಕೊಟ್ಟಿದ್ದಾರೆ. ಐಎಎಸ್ ಅಸೋಸಿಯೇಷನ್ ನವ್ರು ಸಿಎಂಗೆ ದೂರು ಕೊಟ್ಟಿದ್ದಾರೆ. ಆದರೆ ಖುದ್ದು ಸಿಎಂ ಅವರೇ ಅಧಿಕಾರಿಗಳ ವಿರುದ್ಧ ನಡೆದುಕೊಂಡಾಗ ಈ ಅಸೋಸಿಯೇಷನ್ ಗಳು ಆಗ ಎಲ್ಲಿ ಹೋಗಿದ್ದವು? ಎಂದು ಪ್ರಶ್ನಿಸಿದರು.