ಕೆಲವರ ರಾಜಕೀಯ ಲಾಭದ ಉದ್ದೇಶವೂ ಇಂತಹ ಗಲಭೆಯ ಹಿಂದೆ ಇರುವುದನ್ನು ಅಲ್ಲಗಳೆಯುವಂತಿಲ್ಲ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬುಧವಾರ ಜಿಲಲಾ ಆಸ್ಪತ್ರೆ ಎದುರು ಅಂಬುಲೆನ್ಸ್ ಗೆ ಬೆಂಕಿ ಹಚ್ಚಿ, ವಾಹನಗಳಿಗೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದ ಇನ್ನೋರ್ವ ಪುಂಡನನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಹೇರ್ ಖಾಲಿದ್ ಮನಿಯಾರ್ ಬಂಧಿತ ಆರೋಪಿ. 18 ವರ್ಷದ ಈತ ಐಟಿಐ ವಿದ್ಯಾರ್ಥಿ. ಉಜ್ವಲ ನಗರದ 5ನೇ ಕ್ರಾಸ್ ನ ಫಿದ್ದೋ ಕಾ ಅಡ್ಡಾ ನಿವಾಸಿ ಈತ.
ಈಗಾಗಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನರನ್ನು ಬಂಧಿಸಲಾಗಿತ್ತು. ಇದರಿಂದಾಗಿ ಈವರೆಗೆ 15 ಜನರನ್ನು ಬಂಧಿಸಿದಂತಾಗಿದೆ.
ಬುಧವಾರ ರಾತ್ರಿ ಕೊರೋನಾ ರೋಗಿಯೊಬ್ಬ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಸ್ಪತ್ರೆ ಎದುರು ಹಿಂಸಾಚಾರ ನಡೆಸಲಾಗಿತ್ತು. 15 -20 ಜನರು ಬೈಕ್ ನಲ್ಲಿ ಬಂದು ಏಕಾಏಕಿ ಬೆಂಕಿ ಹಚ್ಚು, ಕಲ್ಲು ತೂರಾಟ ನಡೆಸಿ ಗಲಭೆ ನಡೆಸಿ ಪರಾರಿಯಾಗಿದ್ದರು.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 307, 353, 332, 32, 427, 435 ಮತ್ತು 504ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಈ ಕೃತ್ಯ ಮೇಲ್ನೋಟಕ್ಕೆ ದಿಢೀರ್ ನಡೆದಂತೆ ಕಂಡರೂ ಇದು ಪೂರ್ವಯೋಜಿತ ಕೃತ್ಯ ಎನ್ನುವುದಕ್ಕೆ ಹಲವು ನಿದರ್ಶನಗಳಿದ್ದವು.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿಯಲ್ಲಿ ಈ ಹಿಂದೆ ಪದೇ ಪದೆ ನಡೆಯುತ್ತಿದ್ದ ಕೋಮು ಗಲಭೆಯಲ್ಲೂ ಇವರಲ್ಲಿ ಹಲವರು ಪಾಲ್ಗೊಳ್ಳುತ್ತಿದ್ದರೆನ್ನಲಾಗಿದೆ. ಅದೇ ಮಾದರಿಯಲ್ಲಿ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡು ಹಿಂಸಾಚಾರ ನಡೆದಿದೆ.
ಕೆಲವರ ರಾಜಕೀಯ ಲಾಭದ ಉದ್ದೇಶವೂ ಇಂತಹ ಗಲಭೆಯ ಹಿಂದೆ ಇರುವುದನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎನ್ನುವ ಆಗ್ರಹ ಕೇಳಿಬಂದಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಸಂಬಂಧಿಸಿದ ಸುದ್ದಿಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ –
ಬೆಳಗಾವಿ ಆಸ್ಪತ್ರೆ ಎದುರು ಹಿಂಸಾಚಾರ: ಬೆಂಕಿ, ಕಲ್ಲು ತೂರಾಟ
ಬೆಳಗಾವಿ ಹಿಂಸಾಚಾರ ಪೂರ್ವಯೋಜಿತವೇ?
ಬೆಳಗಾವಿ ಹಿಂಸಾಚಾರ: 14 ಪುಂಢರ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ