CrimeKarnataka NewsLatest

*ವಕೀಲನಿಗೆ ಗುಂಡಿಕ್ಕಿ ಹತ್ಯೆ*: *ಬಾಡಿಗೆಗೆ ಇದ್ದವರಿಂದಲೇ ಕೃತ್ಯ*

ಪ್ರಗತಿವಾಹಿನಿ ಸುದ್ದಿ: ದುಷ್ಕರ್ಮಿಗಳು ವಕೀಲರೊಬ್ಬರಿಗೆ ಗುಂಡಿಟ್ಟು ಹತ್ಯೆಗೈದಿರುವ ಘೋರ ಘಟನೆಯೊಂದು ನಡೆದಿದೆ.

ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆ ಬಳಿಕ ಸುತ್ತಮುತ್ತಲಿನ ಪ್ರದೇಶದ ಜನರು ಬೆಚ್ಚಿ ಬಿದ್ದಿದ್ದಾರೆ.

ಮಂಜುನಾಥ್‌ ಮೃತಪಟ್ಟ ವಕೀಲರು. ಮಂಜುನಾಥ್ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಬಿಹಾರ ಮೂಲದ ವ್ಯಕ್ತಿಗಳಿಂದಲೇ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಅಲ್ಲದೇ ಬಾಡಿಗೆ ವಿಚಾರಕ್ಕೆ ಕಿರಿಕ್‌ ಆಗಿದೆ ಅನ್ನೋ ಶಂಕೆಯೂ ಇದೆ.

ಪಟ್ಟಂದೂರು ಅಗ್ರಹಾರದಲ್ಲಿ ವಕೀಲ ಮಂಜುನಾಥ್ ಪತ್ನಿ ಜೊತೆ ವಾಸವಾಗಿದ್ದರು. ಭಾನುವಾರ ತಡರಾತ್ರಿ 12 ಗಂಟೆ ಸುಮಾರಿಗೆ ಯಾರೋ ಮಂಜುನಾಥನಿಗೆ ಫೋನ್ ಮಾಡಿ ಬಾಡಿಗೆ ಕೊಡಬೇಕೆಂದು ಮನೆಯಿಂದ ಆಚೆಗೆ ಕರೆದಿದ್ದಾರೆ. ಮಂಜುನಾಥ್ ಮನೆಯಿಂದ ಆಚೆಗೆ ಬಂದ ತಕ್ಷಣ ಓರ್ವ ದುಡ್ಡುಕೊಡಲು ಮುಂದಾಗಿದ್ದಾನೆ, ಅದೇ ವೇಳೆ ಇನ್ನೊಬ್ಬನು ತಲೆಗೆ ಶೂಟ್ ಮಾಡಿದ್ದಾನೆ.

ತಕ್ಷಣವೇ ಮಂಜುನಾಥ್‌ ರನ್ನ ಮಣಿಪಾಲ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಬಳಿಕ ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Related Articles

Back to top button