Kannada NewsLatestSports

*ನಿಜವಾಯ್ತು, ಈ ಸಲ ಕಪ್ ನಮ್ದೇ….* *18 ವರ್ಷಗಳ ವನವಾಸ ಅಂತ್ಯ: ಚೊಚ್ಚಲ‌ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಆರ್ ಸಿಬಿ*

ಪ್ರಗತಿವಾಹಿನಿ ಸುದ್ದಿ : ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡ ಪಂಜಾಪ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಈ ಸಲ ಕಪ್ ನಮ್ದೇ ಎಂದು ಗೆದ್ದು ಬೀಗಿದೆ.

ತನ್ಮೂಲಕ ಮೊದಲ ಬಾರಿಗೆ ಬೆಂಗಳೂರು ತಂಡ ಕಪ್ ಗೆದ್ದುಕೊಂಡಿದೆ. ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಪಂಜಾ ತಂಡ 184 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

Home add -Advt

 18 ವರ್ಷಗಳ ವನವಾಸ ಅಂತ್ಯ: ಚೊಚ್ಚಲ‌ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದ ಆರ್ ಸಿಬಿ

ಅಹಮದಾಬಾದ್: ಕಳೆದ 18 ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ 18 ಆವೃತ್ತಿಯ ಐಪಿಎಲ್ ನಲ್ಲಿ 6 ರನ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡಿತು. ಈ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದ ಆರ್ ಸಿಬಿ, ಕೋಟಿ ಕೋಟಿ ಕನ್ನಡಿಗರ ಕನಸನ್ನು ನನಸಾಗಿಸಿತು. 

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ‌ಸಮರ್ಥ ನಿರ್ವಹಣೆ ತೋರಿದ ಆರ್ ಸಿಬಿ ತಂಡ ಟೂರ್ಬಿಯುದ್ದಕ್ಕೂ ಭರ್ಜರಿ ನಿರ್ವಹಣೆ ತೋರಿತು. ಇದಕ್ಕೂ ಮೊದಲು ‌2009, 2011 ಹಾಗೂ 2016ರಲ್ಲಿ ಫೈನಲ್‌ನಲ್ಲಿ ನಿರಾಸೆ ಕಂಡಿದ್ದ ಆರ್ ಸಿಬಿ, ಕಡೆಗೂ ಪ್ರತಿಷ್ಠಿತ ಟ್ರೋಫಿ ಗೆದ್ದುಕೊಂಡಿತು. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ  20 ಓವರ್‌ಗಳಲ್ಲಿ  9‌‌ ವಿಕೆಟ್ ಗೆ 190 ರನ್ ಗಳಿಸಿದರೆ, ಪ್ರತಿಯಾಗಿ ಪಂಜಾಬ್ ತಂಡ 7 ವಿಕೆಟ್ ಗೆ 184 ರನ್ ಗಳಿಸಲಷ್ಟೇ‌‌ ಶಕ್ತವಾಯಿತು.

*ಆರ್ಸಿಬಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ*

ಮೊದಲ ಬಾರಿಗೆ ಟ್ರೋಪಿ ಗೆದ್ದ ಆರ್ಸಿಬಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದಿಸಿದ್ದಾರೆ.

ಟಿ-20 ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

18 ವರ್ಷಗಳ ಕನಸು ನನಸು ಮಾಡಿದ ಆರ್ ಸಿ ಬಿ ತಂಡಕ್ಕೆ ಹೃತ್ಪೂರ್ವಕ ಶುಭಾಶಯ ಹೇಳಿರುವ ಡಿ ಕೆ ಶಿವಕುಮಾರ್ ಅವರು, “ಈ ಸಲ ಕಪ್ ನಮ್ದೇ..” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಟಿವಿ ಪರದೆ ಮೂಲಕ ಪಂದ್ಯ ವೀಕ್ಷಿಸಿದ ಡಿಸಿಎಂ ಅವರು ಆರ್ ಸಿ ಬಿ ಗೆಲ್ಲುತ್ತಿದ್ದಂತೆ ಸಂಭ್ರಮ ಆಚರಿಸಿದರು.

ಈ ಒಂದು ಶುಭ ದಿನ, ಶುಭ ಘಳಿಗೆಗಾಗಿ ಇಡೀ ಕರ್ನಾಟಕ ಹಂಬಲಿಸಿತ್ತು. ಇದನ್ನು ಸಾಕಾರಗೊಳಿಸಿದ ರಜತ್ ಪಟೀದಾರ್ ಹಾಗೂ ವಿರಾಟ್ ಕೊಹ್ಲಿ ಅವರ ತಂಡಕ್ಕೆ ಮಾಧ್ಯಮ ಹೇಳಿಕೆಯಲ್ಲಿ ಶುಭ ಹಾರೈಸಿದ್ದಾರೆ.

https://twitter.com/CMofKarnataka/status/1929962173905969226

ಈ ಸಲ ಕಪ್ ನಮ್ದು ಎಂದ ಹೆಚ್.ಡಿ. ಕುಮಾರಸ್ವಾಮಿ

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ರೋಚಕ ಗೆಲುವು

ಪಟಿದಾರ್ ಪಡೆ, ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸಿದ ಕೇಂದ್ರ ಸಚಿವರು

ನವದೆಹಲಿ: ಐಪಿಎಲ್ 2025 ಟೂರ್ನಿಯಲ್ಲಿ ರೋಚಕ ಗೆಲುವು ಸಾಧಿಸಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿನಂದಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಸಲ ಕಪ್ ನಮ್ದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತಂಡ ಸ್ಪೂರ್ತಿಯಿಂದ ಆಡಿದ ಪಟಿದಾರ್ ಪಡೆಯನ್ನು ಹಾಗೂ ವಿಶೇಷವಾಗಿ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಐತಿಹಾಸಿಕ ದ್ವಿಗಿಜಯ ಸಾಧಿಸಿದ ಆರ್ ಸಿಬಿ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ. ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

Related Articles

Back to top button