50 ಓವರ್ ಗಳ ಪಂದ್ಯದಲ್ಲಿ ವಿಶ್ವದಾಖಲೆ ಮುರಿದ ಜಗದೀಸನ್

ಪ್ರಗತಿವಾಹಿನಿ ಸುದ್ದಿ, ಚೆನ್ನೈ: 50 ಓವರ್‌ಗಳ ಪಂದ್ಯವೊಂದರಲ್ಲಿ 277 ರನ್‌ಗಳನ್ನು ಪಡೆದ ತಮಿಳುನಾಡಿನ ವಿಕೆಟ್‌ಕೀಪರ್-ಓಪನರ್ ನಾರಾಯಣ್ ಜಗದೀಸನ್ ಅವರು ಸೋಮವಾರ ವಿಶ್ವ ದಾಖಲೆಯನ್ನು ಮುರಿದ್ದಾರೆ.

ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ 141 ಎಸೆತಗಳಲ್ಲಿ 277 ರನ್ ಗಳಿಸಿ 26ರ ಹರೆಯದ ಆಟಗಾರ ದಾಖಲೆ ನಿರ್ಮಿಸಿದ್ದಾರೆ.

Home add -Advt

2002ರಲ್ಲಿ ಗ್ಲಾಮೊರ್ಗಾನ್ ವಿರುದ್ಧ ಸರ್ರೆ ಪರ 268 ರನ್ ಗಳಿಸಿದ್ದ ಅಲಿಸ್ಟರ್ ಡಂಕನ್ ಬ್ರೌನ್ ಈ ಹಿಂದಿನ ದಾಖಲೆ ನಿರ್ಮಿಸಿದ್ದರು. ಅದನ್ನೀಗ ಮುರಿದ ಕೀರ್ತಿಗೆ ಜಗದೀಸನ್ ಪಾತ್ರರಾಗಿದ್ದಾರೆ.

ಚಳಿ ನಡುವೆಯೇ ಮತ್ತೆ ಭಾರಿ ಮಳೆ ಎಚ್ಚರಿಕೆ

Related Articles

Back to top button