Belagavi NewsBelgaum NewsKannada NewsKarnataka NewsPolitics
*ರಾಷ್ಟ್ರ ಹಾಗೂ ರಾಜ್ಯ ರಾಜಧಾನಿಗೆ ಬೆಳಗಾವಿಯಿಂದ ದಿನನಿತ್ಯ ಹಾರಲಿದೆ ಇಂಡಿಗೋ ವಿಮಾನ: ಸಂಸದ ಜಗದೀಶ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ – ದೆಹಲಿ ಮತ್ತು ಬೆಂಗಳೂರು – ಬೆಳಗಾವಿ ನಡುವೆ ಬರುವ 16 ಸೆಪ್ಟೆಂಬರ್ 2025 ರಂದು ಮತ್ತು 21 ಸೆಪ್ಟೆಂಬರ್ 2025 ರಂದು ಇಂಡಿಗೋ ವಿಮಾನ ಎಂದಿನಂತೆ ದಿನನಿತ್ಯದ ಸಂಚಾರ ಆರಂಭಿಸಲಿದೆ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಕೆಲವು ದಿನಗಳಿಂದ ಇಂಡಿಗೋ ಬೆಳಗಾವಿ – ದೆಹಲಿ ನಡುವಿನ ತನ್ನ ಸಂಚಾರವನ್ನು ಎರಡು ದಿನಗಳಿಗೊಮ್ಮೆ ನಡೆಸುತ್ತಿತ್ತು ಮತ್ತು ಬೆಂಗಳೂರು – ಬೆಳಗಾವಿ ನಡುವೆ ಬೆಳಗಿನ ಸಂಚಾರವನ್ನು ರದ್ದು ಮಾಡಲಾಗಿದ್ದು ಇಲ್ಲಿ ಸ್ಮರಣಿಯ.
ಇಂಡಿಗೋ ವಿಮಾನಯನ ಅಧಿಕಾರಯೊಂದಿಗೆ ಸಭೆ ನಡೆಸಿ, ಒತ್ತಾಯ ಮಾಡಿ, ಈ ಕ್ರಮ ಜರುಗಿಸಿದ ಬಗ್ಗೆ ಸಂಸದರಾದ ಜಗದೀಶ ಶೆಟ್ಟರ್ ತಮ್ಮ ಸಂತಸ ವ್ಯಕ್ತ ಪಡಿಸಿದ್ದು, ಇಂಡಿಗೋ ವಿಮಾನಯಾನ ಅಧಿಕಾರಿಗಳಿಗೆ ತಮ್ಮ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.