Kannada NewsKarnataka NewsLatestPolitics

*ಬೊಮ್ಮಾಯಿ ಅವರ ಬೇಕಾಬಿಟ್ಟಿ ಕಾಮಗಾರಿ; ಬಿಲ್ ಬಾಕಿ ಇರುವುದು ಬಿಜೆಪಿ ಅವಧಿಯದ್ದು; ಮಾಜಿ ಸಿಎಂ ಶೆಟ್ಟರ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಗುತ್ತಿಗೆದಾರರ ಬಾಕಿ ಬಿಲ್ ಇರುವುದು ಕಳೆದ ಬಿಜೆಪಿ ಸರ್ಕಾರದ್ದು ಹೊರತು ಈಗಿನ ಕಾಂಗ್ರೆಸ್ ಸರ್ಕಾರದ್ದಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗರರೊಂದಿಗೆ ಮತನಾಡಿದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಬೇಕಾಬಿಟ್ಟಿಯಾಗಿ ಕಾಮಗಾರಿ ಮಂಜೂರು ಮಾಡಿದರು. ಆದರೆ ಈ ಕಾಮಗಾರಿಗಳಿಗೆ ಹಣಕಾಸು ಇಲಾಖೆಯ ಒಪ್ಪಿಗೆ ಇರಲಿಲ್ಲ ಎಂದು ತಿಳಿಸಿದ್ದಾರೆ.

ಗುತ್ತಿಗೆದಾರರ ಬಿಲ್ ಬಾಕಿ ಇರುವುದು ಬಿಜೆಪಿ ಸರ್ಕಾರದ ಅವಧಿಯದ್ದು. ಈಗ ಬಿಜೆಪಿ ನಾಯಕರು ದುರುದ್ದೇಶಕ್ಕಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದೆಲ್ಲವೂ ಬಿಜೆಪಿ ಸರ್ಕಾರದ ರಾಡಿ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.

Home add -Advt

ಇನ್ನು ಸಚಿವ ಚಲುವರಾಯಸ್ವಾಮಿ ವಿರುದ್ಧ ಪೇ ಸಿಎಸ್ ಅಭಿಯಾನ ಕುರಿತು ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಪೇ ಸಿಎಸ್ ಗೆ ಯಾವುದೇ ಅರ್ಥವಿಲ್ಲ. ಕಾರ್ಬಲ್ ಕಾಪಿ. ಜನ ಇದನ್ನು ನಂಬುವುದೂ ಇಲ್ಲ. ಕಾಂಗ್ರೆಸ್ ನವರು ಮಾಡಿದ್ದನ್ನೇ ಅವರು ಕಾಪಿ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button