Kannada NewsLatest

ಜಾಗನೂರ ಗ್ರಾಮವನ್ನು ಆದರ್ಶ ಗ್ರಾಮ ಮಾಡಲು ಯತ್ನ; ಮಹಾಂತೇಶ ಕವಟಗಿಮಠ

ಪ್ರಗತಿವಾಹಿನಿ ಸುದ್ದಿ; ಕಬ್ಬೂರ: ಜಾಗನೂರ ಗ್ರಾಮವನ್ನು ಆದರ್ಶ ಗ್ರಾಮ ಮಾಡಲು ಸಚಿವ ಕತ್ತಿ ಸಹೋದರರು ಮತ್ತು ಶಾಸಕ ದುರ್ಯೋದನ ಐಹೊಳೆ ನಾನು ಪ್ರಾಮಾಣಿಕವಾದ ಕಾರ್ಯ ಮಾಡಿದ್ದೇವೆ ಎಂದು ವಿಧಾನ ಪರಿಷತ್ ಸರಕಾರದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ಗುರುವಾರ ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದಲ್ಲಿ ವಿವಿಧ ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಮುಖ್ಯಮಂತ್ರಿ ಅವರು ಅಮೃತ ಗ್ರಾಮಕ್ಕೆ ಚಾಲನೆ ನಿಡಿದ್ದಾರೆ. ಜಾಗನೂರ ಗ್ರಾಮವನ್ನು ಅಮೃತ ಗ್ರಾಮ ಯೋಜನೆಯಡಿಯಲ್ಲಿ ತೆಗೆದುಕೊಂಡು ಅಭಿವೃದ್ದಿ ಪಡಿಸಲಾಗುವದು ಎಂದರು. ಇಲ್ಲಿನ ಜನರು ನೀರಿನ ಸದ್ಬಳಕೆ ಮಾಡಿಕೊಂಡು ಉತ್ತಮವಾದ ಫಸಲು ಬೆಳೆದಿದ್ದಾರೆ.

ಕಳೆದ 20 ವರ್ಷದ ಹಿಂದೆ ಜಾಗನೂರ ಗ್ರಾಮ ಹಿಂದುಳಿದ ಕುಗ್ರಾಮವಾಗಿತ್ತು.ಇದೀಗ ಇಲ್ಲಿನ ಯುವಕರು ಮಾದರಿ ಗ್ರಾಮ ಮಾಡಲು ಹೈಟೇಕ್ ಗೃಂಥಾಲಯ ನಿರ್ಮಾಣಕ್ಕೆ ದೇಣಿಗೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವ ಕಾರ್ಯ ಮಾಡಿರುವದು ಹೆಮ್ಮೆ ಸಂಗತಿ ಎಂದರು.ಗೃAಥಾಲಯ ಪ್ರಾರಂಭದಿAದ ಸಮಾಜದ ಕಟ್ಟ ಕಡೆಯ ಜನರಿಗೆ ಶಿಕ್ಷಣ ನೀಡುವ ಕಾರ್ಯ ಮಾಡಿರುವದಕ್ಕೆ ಸರಕಾರದ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.ಇಲ್ಲಿನ ೨೦ ಕಿಂತ ಹೆಚ್ಚು ಯುವಕರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ಮಾಡುತ್ತಿರುವದು ಇಲ್ಲಿನ ಯುವಕರಿಗೆ ಪ್ರೇರಣೆಯಾಗಿದೆ.

ಆದಿ ಜಾಂಭವ ಅಭಿವೃದ್ದಿ ನಿಗಮ ಅಧ್ಯಕ್ಷ ಹಾಗೂ ಶಾಸಕ ದುರ್ಯೋದನ ಐಹೊಳೆ ಮಾತನಾಡಿ ಬ್ರೀಡ್ಜ್- ಕಂ ಬಾಂಧಾರ ನಿರ್ಮಾಣದಿಂದ ಈ ಭಾಗದಲ್ಲಿ ನೀರಾವರಿಗೆ ಸಹಕಾರಿಯಾಗಿದೆ.ಜಾಗನೂರ ಗ್ರಾಮಸ್ಥರು ಜನಪ್ರತಿನಿಧಿಗಳಿಂದ ಗ್ರಾಮಕ್ಕೆ ಬೇಕಾಗುವ ಎಲ್ಲಾ ಕಾರ್ಯ ಮಾಡಿಸಿಕೊಳ್ಳುತ್ತಿರುವದು ಹೇಮ್ಮೆಯ ಸಂಗತಿಯಾಗಿದೆ.ಜಾಗನೂರ ಗ್ರಾಮಸ್ಥರ ಅವರು ನನಗೆ ಸದಾ ಆರ್ಶಿವಾದ ಮಾಡಿದ್ದಾರೆ ಅವರ ಋಣ ನನ್ನ ಮೇಲೆ ಇದೆ ಎಂದರು.

ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪವನ ಕತ್ತಿ ಮಾತನಾಡಿ ಜಾಗನೂರ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ ಎಂದರು.ಗ್ರಾಮದಲ್ಲಿ ಗೃಂಥಾಲಯ ಪ್ರಾರಂಭಿಸುವದರಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಲು ಸಹಕಾರಿಯಾಗುತ್ತದೆ. ಗ್ರಾಮದ ಮಕ್ಕಳಿಗೆ ನೂತನ ತಂತ್ರಜ್ಞಾನ ಸ್ಮಾರ್ಟ್ ತರಗತಿಗಳನ್ನು ನೀಡುವ ಕಾರ್ಯ ಮಾಡುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಮಹಾದೇವಿ.ಶಿ.ಸನದಿ,ಗ್ರಾಮ ಪಂಚಾಯತ ಉಪಾಧ್ಯಕ್ಷ ಲಕ್ಷ್ಮಣ ಹಣಮನ್ನವರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಏಗನಗೌಡರ, ಹಿಡಕಲ್ ಡ್ಯಾಮ ಮಹಾಮಂಡಳ ಅಧ್ಯಕ್ಷ ಅಶೋಕ ಕಂಡ್ರಟ್ಟಿ,ಜಿಲ್ಲಾ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ.ಕಳಸಪ್ಪಗೋಳ, ಹಿರಾ ಸಹಕಾರಿ ಸಕ್ಕರೆ ಕಾರಖಾನೆ ನಿರ್ದೆಶಕ ಸುರೇಶ ಬೆಲ್ಲದ,ಪಿಕೆಪಿಎಸ್ ಅಧ್ಯಕ್ಷ ಹಣಮಂತ ದುಂಡಪ್ಪಾ ರಬಕವಿ,ಪಿಕೆಪಿಎಸ್ ಉಪಾಧ್ಯಕ್ಷ ರಾಮಪ್ಪ ಬಡಕಪ್ಪಾ ಪುಕಾಟೆ,ನಿಂಗಪ್ಪಾ ಪಕಾಂಡೆ, ಪಿಎಸ್ ಐ ಯಮನಪ್ಪಾ ಮಾಂಗ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ರವೀಂದ್ರ.ಬಿ.ದಶವಂತ, ಸಿದ್ದು ಖಿಂಡಿ,ಶಿವರಾಯ ಸನದಿ,ಅಜ್ಜಪ್ಪ ಮಸಗುಪ್ಪಿ,ರಾಮಚಂದ್ರ ಹಣಮನ್ನವರ,ಮುತ್ಯಪ್ಪ ಹಣಮ್ಮನವರ,ಪರಸಪ್ಪ ಹನುಮನ್ನವರ,ಲಕ್ಷö್ಮಣ ಮಂಗಿ,ಮಾರುತಿ ಹಮಾರ,ಬಾಲೇಶ ಪಾಂಡ್ರೆ,ಬೀರಪ್ಪಾ ಪೂಜಾರಿ, ಮಾಂತೇಶ ಶಿರಗೂರೆ, ಅಪ್ಪಯ್ಯ ಹಣಮ್ಮನವರ,ಮಲ್ಲೇಶ ಹಣಮಂತಗೋಳ ಹಾಗೂ ಗ್ರಾಮ ಪಂಚಾಯತ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಪಶು ಆಸ್ಪತ್ರೆ ಹಾಗೂ ಗ್ರಾಮದಲ್ಲಿ ಭವನ ನಿರ್ಮಾಣ ಮಾಡುವಂತೆ ವಿಧಾನ ಪರಿಷತ್ ಸರಕಾರದ ಮುಖ್ಯಸಚೇತಕ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರಿಗೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಹೈಟೇಕ್ ಗೃಂಥಾಲಯ ನಿರ್ಮಾಣಕ್ಕೆ ದಾನ ಮಾಡಿದವರನ್ನು ಪವನ ಕತ್ತಿ ಅವರು ಸನ್ಮಾನಿಸಿದರು. ಕಾರ್ಯಕ್ರಮವನ್ನು ರವೀಂದ್ರ ಅಲಗೂರೆ ಸ್ವಾಗತಿಸಿ ವಂದಿಸಿದರು.

ದೆಹಲಿ ಪ್ರವಾಸ ಫಲಪ್ರದ: ಹಾರ್ಡವೇರ್ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button