Kannada NewsKarnataka NewsLatest

*ಜೈ ಶ್ರೀರಾಮ್ ಘೋಷಣೆ ಕೂಗಲು ಅಡ್ಡಿಪಡಿಸಿ ಹಲ್ಲೆ; ನಾಲ್ವರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಜೈ ಶ್ರೀರಾಮ್ ಘೋಷಣೆ ಕೂಗಲು ಅಡ್ದಿಪಡಿಸಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರನ್ನು ಬಂಧಿಸಲಾಗಿದೆ.

Home add -Advt

ಶ್ರೀರಾಮನವಮಿ ಮುಗಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದವರನ್ನು ರಸ್ತೆ ಮಧ್ಯೆ ಅಡ್ಡಗಟ್ಟಿದ ಅನ್ಯಕೋಮಿನ ಯುವಕರು ಜೈಶ್ರೀರಾಮ್ ಘೋಷಣೆ ಕೂಗದಂತೆ ಹೇಳಿದ್ದಾರೆ. ಜೈ ಶ್ರೀರಾಮ್ ಇಲ್ಲ, ಓನ್ಲಿ ಅಲ್ಲಾಹು ಅಕ್ಬರ್ ಎನ್ನಬೇಕು ಎಂದಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ವಗ್ವಾದ ನಡೆದು ಗಲಾಟೆಯಾಗಿದ್ದು ಹಲ್ಲೆ ಕೂಡ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಫರ್ಮಾನ್, ಸಮೀರ್ ಹಾಗೂ ಇಬ್ಬರು ಅಪ್ರಾಪ್ತರು ಎನ್ನಲಾಗಿದೆ.


Related Articles

Back to top button