ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಜಾರ್ಖಂಡ ರಾಜ್ಯದಲ್ಲಿರುವ ಜೈನ ಧರ್ಮಿಯರ ಪವಿತ್ರ ತೀರ್ಥಕ್ಷೇತ್ರವಾದ ಸಮ್ಮೇದ ಶಿಖರಜಿ ಕ್ಷೇತ್ರವನ್ನು ಅಲ್ಲಿನ ಸರಕಾರ ಪ್ರವಾಸಿ ತಾಣವೆಂದು ಮಾರ್ಪಾಡು ಮಾಡುತ್ತಿರುವುದನ್ನು ಖಂಡಿಸಿ ಶನಿವಾರ ಬೆಳಗಾವಿಯಲ್ಲಿ ಜೈನ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆಯನ್ನ ನಡೆಸಲಾಯಿತು.
ಜಾರ್ಖಂಡ ಸರಕಾರ ತನ್ನ ಆದೇಶವನ್ನು ಹಿಂಪಡೆದು ತೀರ್ಥಕ್ಷೇತ್ರವನ್ನು ಸಂರಕ್ಷಿಸಿಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಾರ್ಖಂಡ ರಾಜ್ಯದಲ್ಲಿರುವ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರಜಿಯನ್ನು ಪ್ರವಾಸಿ ತಾಣವಾಗಿ ಮಾಡಿದರೆ ಅಲ್ಲಿ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ಪ್ರಾರಂಭಗೊಂಡು ತೀರ್ಥಕ್ಷೇತ್ರದ ಪಾವಿತ್ರತ್ಯೆ ಹಾಳಾಗಲಿದೆ.
ಈ ಕ್ಷೇತ್ರ ಸಂಪೂರ್ಣ ಜೈನ ಸಮಾಜದ ಏಕೈಕ ಹಾಗೂ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಇದನ್ನು ಪ್ರವಾಸಿ ತಾಣ ಮಾಡಬಾರದು. ಈ ಕ್ಷೇತ್ರದಲ್ಲಿ 24 ತೀರ್ಥಂಕರರ ಪೈಕಿ 20 ತೀರ್ಥಂಕರರು ಮೋಕ್ಷವಾದ ಕ್ಷೇತ್ರವಾಗಿದೆ. ಅಲ್ಲದೇ ಸುಮಾರು 20 ಕೋಟಿಗೂ ಹೆಚ್ಚು ಮುನಿಗಳು ಮೋಕ್ಷಕ್ಕೆ ಹೋದ ಕ್ಷೇತ್ರವಾಗಿದೆ. ಇದನ್ನು ಪ್ರವಾಸಿ ತಾಣ ಮಾಡಬಾರದು ಎಂದು ಒಕ್ಕೂರಲಿನಿಂದ ಜೈನ ಸಮಾಜ ಆಗ್ರಹಿಸಿದೆ.
ಜಾರ್ಖಂಡ ಸರಕಾರದ ವಿನಂತಿ ಮೇರೆಗೆ ಕೇಂದ್ರ ಸರಾಕಾರವೂ ಸಹ ಒಂದು ಅಧ್ಯಾದೇಶ ಹೊರಡಿಸಿ ಇದೊಂದು ಪ್ರವಾಸಿ ಕ್ಷೇತ್ರ ಮಾಡಲು ಮುಂದಾಗಿರುವುದು ಖಂಡನೀಯ. ಜೈನ ಸಮಾಜ ಯಾವಾಗಲು ಅಹಿಂಸೆ ಮಾರ್ಗದಿಂದ ನಡೆಯುವ ಸಮಾಜವಾಗಿದೆ.
ಈ ಸಮಾಜದ ತೀರ್ಥಕ್ಷೇತ್ರಗಳು ಕೈತಪ್ಪಿ ಅನ್ಯರ ಪಾಲಾಗಾತ್ತಿವೆ. ಒಂದು ವೇಳೆ ಪ್ರವಾಸಿ ತಾಣವಾದರೆ ಅಲ್ಲಿ ಮದ್ಯ ಸೇವನೆ, ಮಾಂಸ ಸೇವನೆ ಮತ್ತು ಇನ್ನಿತರ ಅನೈತಿಕ ಚಟುವಟಿಗಳು ನಡೆದು ತೀರ್ಥಕ್ಷೇತ್ರದ ಪಾವಿತ್ರ್ಯತೆ ಹಾಳಾಗಲಿದೆ.
ಹಾಗಾಗಿ ಜಾರ್ಖಂಡ ಸರಕಾರ ಮತ್ತು ಕೇಂದ್ರ ಸರಕಾರ ತೀರ್ಥಕ್ಷೇತ್ರವನ್ನು ಪ್ರವಾಸಿ ತಾಣ ಮಾಡುವ ಯೋಜನೆಯನ್ನು ಕೈಬಿಟ್ಟು ತೀರ್ಥಕ್ಷೇತ್ರದ ಪಾವಿತ್ರ್ಯತೆ ಕಾಪಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ನಿತಿನ ಪಾಟೀಲ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ನ್ಯಾಯವಾದಿ ರವಿರಾಜ ಪಾಟೀಲ, ರಾಜೇಂದ್ರ ಜೈನ , ವಿನೋದ ದೊಡ್ಡಣ್ಣವರ, ಭರತ ಪಾಟೀಲ, ನಗರ ಸೇವಕಿ ಪ್ರೀಯಾ ಸಾತಗೌಡಾ, ಜೈನ ಯುವ ಸಂಘಟನೆಯ ಅಭಯ ಅವಲಕ್ಕಿ, ಕುಂಥುಸಾಗರ ಹರದಿ, ಸಂದೀಪ ಸೈಬನ್ನವರ, ಕುಂತಿನಾಥ ಕಲಮನಿ, ಸುನಿಲ ಹನಮಣ್ಣವರ, ಪುಷ್ಪಕ ಹನಮಣ್ಣವರ, ಮುಕೇಶ ಪೋರವಾಲ, ರಾಜೇಂದ್ರ ಜಕ್ಕನ್ನವರ, ಉಗಾರ ಗ್ರಾಮದ ಶೀತಲಗೌಡ ಪಾಟೀಲ, ನ್ಯಾಯವಾದಿ ಸಂಜಯ ಕುಚನೂರೆ, ವಿಕ್ರಮ ಜೈನ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಶನಿವಾರ ಬೆಳಿಗ್ಗೆ 11 ಗಂಟೆಗೆ ನಗರದ ಧರ್ಮವೀರ ಸಂಭಾಜಿ ವೃತ್ತ ( ಬೋಗಾರವೇಸ) ಸರ್ಕಲದಿಂದ ಮೆರವಣಿಗೆ ಪ್ರಾರಂಭಗೊಂಡಿತು. ಈ ಮೆರವಣಿಗೆಯಲ್ಲಿ ಬೆಳಗಾವಿ ನಗರ , ಮತ್ತು ತಾಲೂಕು ಬೈಲಹೊಂಗಲ, ಖಾನಾಪೂರ ಹುಕ್ಕೇರಿ ತಾಲೂಕಿನ ಜೈನ ಸಮಾಜದ ಮುಖಂಡರು, ಮಹಿಳಾ ಮಂಡಳ ಸದಸ್ಯರು, ಎಲ್ಲ ಬಸದಿಗಳ ಟ್ರಸ್ಟಿಗಳು, ಯುವಕ ಮಂಡಳಗಳ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸೇರಿದಂತೆ ಸುಮಾರು 10 ಸಾವಿರಕ್ಕು ಹೆಚ್ಚು ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.
https://pragati.taskdun.com/3-studentdeathvijayanagara/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ