Wanted Tailor2
Cancer Hospital 2
Bottom Add. 3

*ಜಿತೋ ಸಂಸ್ಥೆಯ ವತಿಯಿಂದ ವೃದ್ದಾಶ್ರಮದಲ್ಲಿ ದೀಪಾವಳಿ ಆಚರಣೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೀಪಾವಳಿ ಹಬ್ಬದ ನಿಮಿತ್ತ ಜೈನ್ ಇಂಟೆರ್‌ನ್ಯಾಷನಲ್ ಟ್ರೆಡ್ ಆರ್ಗನೈಜೇಶನ್ ಜಿತೋ ಸಂಸ್ಥೆಯ ವತಿಯಿಂದ ಬಸವನ ಕುಡಚಿಯಲ್ಲಿರುವ ನಾಗನೂರು ಶ್ರೀ. ಶಿವಬಸವ ಟ್ರಸ್ಟ ಸಂಚಾಲಿತ ಶ್ರೀಮತಿ ಚಿನ್ನಮ್ಮ ಬಸವಂತಯ್ಯಾ ಹಿರೇಮಠ ವೃದ್ದಾಶ್ರಮದಲ್ಲಿ ಇತ್ತಿಚಿಗೆ ವೃದ್ದಾಶ್ರಮದ ಹಿರಿಯರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿತೋ ಚೇರಮನ್ ವೀರಧವಲ ಉಪಾಧ್ಯೆ ಅವರು, ನಾವೆಲ್ಲರೂ ನಮ್ಮ ಮನೆಯಲ್ಲಿ ಹಿರಿಯರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುತೇವೆ. ಎಲ್ಲ ಸಮಾಜದ ವರ್ಗದವರು ದೀಪಾವಳಿ ಹಬ್ಬವನ್ನು ಸಡಗರದಲ್ಲಿ ಆಚರಿಸುತ್ತಾರೆ. ಆದರೆ ಆಶ್ರಮದಲ್ಲಿರುವ ಹಿರಿಯರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಬೇಕೆಂಬ ಬಯಕೆಯೊಂದಿಗೆ ನಾವಿಂದು ನಿಮ್ಮ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇವೆ. ತಾವೆಲ್ಲರೂ ನಮಗೆ ಹಿರಿಯರ ಸಮಾನ. ನಾವು ಸಹ ನಿಮ್ಮ ಮನೆ ಮಕ್ಕಳು ಎಂದು ಭಾವಿಸಿ ನಮ್ಮೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿರಿ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಆಶ್ರಮದಲ್ಲಿದ್ದ ಹಿರಿಯರಿಗೆ ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಇದರ ಜೊತೆಗೆ ಆಶ್ರಮಕ್ಕೆ ೧೫೦೦ ಲೀ. ಸಾಮರ್ಥ್ಯದ ನೀರಿನ ಟ್ಯಾಂಕನ್ನು ಸಹ ನೀಡಲಾಯಿತು. ಜಿತೋ ಸಂಸ್ಥೆಯ ಕಾರ್ಯದರ್ಶಿ ಸಂಜೀವ ದೊಡ್ಡಣ್ಣವರ, ಸದಸ್ಯ ಕುಂತಿನಾಥ ಕಲಮನಿ ,ಕಾರ್ಯಕ್ರಮ ಸಂಯೋಜಕ ಸುನಿಲ ಬಸ್ತವಾಡ ಯುವ ಘಟಕದ ಅಧ್ಯಕ್ಷ ದೀಪಕ ಸುಬೇದಾರ , ಪ್ರನಾಥ ಪಾಟೀಲ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page