Cancer Hospital 2
Bottom Add. 3

*ಸತೀಶ್‌ ಶುಗರ್ಸ್-ಬೆಳಗಾಂ ಶುಗರ್ಸ್: ಪ್ರತಿ ಟನ್ ಕಬ್ಬಿಗೆ 3 ಸಾವಿರ ದರ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸತೀಶ್‌ ಶುಗರ್ಸ್ ಕಾರ್ಖಾನೆ  ಹಾಗೂ ಬೆಳಗಾಂ ಶುಗರ್ಸ್ ಕಾರ್ಖಾನೆಗಳಿಗೆ ಪ್ರಸಕ್ತ 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಪೂರೈಸುವ ಪ್ರತಿ ಟನ್ ಕಬ್ಬಿಗೆ 3000 ಸಾವಿರ ರೂ ದರ ನೀಡಲಾಗುವುದು ಎಂದು ಸತೀಶ್‌ ಶುಗರ್ಸ್ ಹಾಗೂ ಬೆಳಗಾಂ ಶುಗರ್ಸ್ ಕಾರ್ಖಾನೆ ಚೇರಮನ್‌ ಮತ್ತು ಸಿ.ಎಫ್.ಓ ಪ್ರದೀಪಕುಮಾರ ಇಂಡಿ ಘೋಷಿಸಿದ್ದಾರೆ.

ಪತ್ರಿಕಾ ಪ್ರಕಟಣೆಗೆ ಮಾಹಿತಿ ನೀಡಿದ ಅವರು, ಈ ಎರಡು ಕಾರ್ಖಾನೆಗಳಿಂದ ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ಮೂರು ಸಾವಿರ ರೂ ದರ ಪಾವತಿಸಲು ಆಡಳಿತ ಮಂಡಳಿಗಳು ನಿರ್ಧರಿಸಿವೆ ಎಂದು ಪ್ರಕಟಿಸಿದರು.

ತಾಲೂಕಿನ ರೈತರ ಆರ್ಥಿಕ ಅಭ್ಯುದಯಕ್ಕೆ ಈ ಎರಡು ಕಾರ್ಖಾನೆಗಳು ಶ್ರಮಿಸುತ್ತಿವೆ. ಇಲ್ಲಿಯವರೆಗೆ ಆಡಳಿತ ಮಂಡಳಿ ಪ್ರತಿ ವರ್ಷ ಘೋಷಿಸಿದ ದರ ನೀಡುತ್ತ ಬಂದಿದ್ದು ರೈತರೂ ಸಹ ತಾವು ಬೆಳೆದ ಕಬ್ಬನ್ನು ಈ ಕಾರ್ಖಾನೆಗಳಿಗೆ ಪೂರೈಸಿದ್ದಾರೆ. ಪ್ರಸಕ್ತ ವರ್ಷ ಮಳೆ ಕೊರತೆಯಿಂದ ನೀರಿಕ್ಷಿಸಿದಷ್ಟು ಕಬ್ಬು ಬೆಳೆ ಬಂದಿಲ್ಲ. ಆದಾಗ್ಯೂ ಈ ವರ್ಷ ಸಹ ಎಂದಿನಂತೆ ನಿಗದಿತ ಪ್ರಮಾಣದಲ್ಲಿ ಕಬ್ಬು ನುರಿಸಿ ಸಕ್ಕರೆ ಉತ್ಪಾದಿಸುವ ಸಂಕಲ್ಪ ಆಡಳಿತ ಮಂಡಳಿಯವರದ್ದಾಗಿದೆ ಎಂದು ಅವರು ತಿಳಿಸಿದರು.

ಮುಖ್ಯವಾಗಿ 27-10-2023 ರಿಂದ 05-11-2023ರವರೆಗೆ  ಪೂರೈಕೆಯಾದ ಕಬ್ಬಿನ ಬಿಲ್ಲನ್ನು  ಕಬ್ಬು ಪೂರೈಕೆದಾರರ ಖಾತೆಗಳಿಗೆ  ಈಗಾಗಲೇ ಜಮಾ ಮಾಡಲಾಗಿದೆ. ಆದ್ದರಿಂದ  ಸಮಸ್ತ ರೈತ ಬಾಂಧವರು  ನಮ್ಮ ಎರಡು ಕಾರ್ಖಾನೆಗಳಿಗೆ ತಾವು ಬೆಳೆದ  ಗುಣಮಟ್ಟದ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸಿ ಪ್ರಸಕ್ತ ಹಂಗಾಮನ್ನು ಯಶಸ್ವಿಗೊಳಿಸಲು  ಸತೀಶ್‌ ಶುಗರ್ಸ್ ಹಾಗೂ ಬೆಳಗಾಂ ಶುಗರ್ಸ್ ಕಾರ್ಖಾನೆ  ಚೇರಮನ್‌ ಮತ್ತು ಸಿ.ಎಫ್.ಓ  ಪ್ರದೀಪಕುಮಾರ ಇಂಡಿ ವಿನಂತಿಸಿದ್ದಾರೆ.

Bottom Add3
Bottom Ad 2

You cannot copy content of this page