Wanted Tailor2
Cancer Hospital 2
Bottom Add. 3

*ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಕಿಡಿಕಾರಿದ ಮಾಜಿ ಸಿಎಂ ಹೆಚ್ ಡಿಕೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೂಪ್ಲಕೇಟ್ ಸಿಎಂ ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಸಲಹೆಯ ಮೇರೆಗೆ ತಮ್ಮ ಪುತ್ರನ ಕಾಸಿಗಾಗಿ ಹುದ್ದೆ ವಿಡಿಯೋ‌ ವಿವಾದಕ್ಕೆ CSR ಫಂಡ್ ಸ್ವರೂಪ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಕುಮಾರಸ್ವಾಮಿ ಅವರು ರಾಜಕೀಯ ದ್ವೇಷ, ಅಸೂಯೆಯಿಂದ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಅವರು ಈ ವಿಡಿಯೋಗೆ ಸಂಬಂಧಿಸಿ ಸತ್ಯಗಳನ್ನು, ಸಾಕ್ಷ್ಯಗಳನ್ನು ತಿರುವಿದ ರೀತಿ ನೋಡಿದರೆ ನನಗೆ ಅತೀವ ಅಚ್ಚರಿ ಉಂಟಾಗಿದೆ ಎಂದರು.

CSR ಫಂಡ್ ಬಗ್ಗೆ ಮುಖ್ಯಮಂತ್ರಿಗಳು ಸೃಷ್ಟಿ ಮಾಡಿದ ಕಟ್ಟುಕಥೆಗಳು ಅನೇಕ. ಸಿಎಂ ಮಗನ ವಿಡಿಯೋ ಬೆಳಗ್ಗೆ 7 ಗಂಟೆಗೆ ರಿಲೀಸ್ ಆಯಿತು. ಸಿದ್ದರಾಮಯ್ಯ ಅವರು CSR ಫಂಡ್ ಪಟ್ಟಿ ರಿಲೀಸ್ ಮಾಡಿದ್ದು 3 ಗಂಟೆಗೆ ವಿಡಿಯೋ ರಿಲೀಸ್ ಆದ ಕೂಡಲೇ ಕರೆದು CSR ಫಂಡ್ ಅಂತ ಹೇಳಬೇಕಿತ್ತು. 3 ಗಂಟೆವರೆಗೂ ಯಾಕೆ ಹೇಳಲಿಲ್ಲ. ಇದನ್ನು ಯಾರಾದರೂ ನಂಬುತ್ತಾರಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಒಂದು ಶಾಲೆಗೆ 2.5 ಲಕ್ಷ ರೂ. CSR ಫಂಡ್ ತಗೋತೀರಾ? ಯಾರ ಕಿವಿಯ ಮೇಲೆ ಹೂವು ಇಡಲು ಹೊರಟಿದ್ದಾರೆ ಇವರು? ವಿಧಾನಮಂಡಲ ಅಧಿವೇಶನದಲ್ಲಿ ನಾನು ಇದನ್ನು ಪ್ರಸ್ತಾಪ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.

ಸತ್ಯ ಹೇಳಿದ್ದಕ್ಕೆ ನನ್ನ ವಿರುದ್ಧ ಟೀಕೆಗಳ ಸುರಿಮಳೆ ಆಗುತ್ತದೆ. ಕಾಂಗ್ರೆಸ್ ಪಕ್ಷದ ಮರಿ ಪುಢಾರಿಗಳು ಏನೇ ಸರ್ಟಿಫಿಕೇಟ್ ಕೊಟ್ಟರೂ ಸಮಚಿತ್ತವಾಗಿ ಸ್ವೀಕಾರ ಮಾಡುತ್ತೇನೆ. ವಿಡಿಯೋ ಹೊರ ಬಂದ ಗುರುವಾರದಂದು 12 ಗಂಟೆಗೆ ಡೂಪ್ಲಿಕೇಟ್ ಸಿಎಂ ಅವರು ಸಿಎಂ ಬಳಿ ಹೋಗಿದ್ದರು. ಅವರು ಹೇಳಿಕೊಟ್ಟರಾ CSR ಫಂಡ್ ಅಂತ ಹೇಳಿ ಅಂತ? ಡಿಸಿಎಂಗೆ CSR ಫಂಡ್ ಅಂದರೆ ಭಾರೀ ಇಷ್ಟ. ಡಿಸಿಎಂ ಹೇಳಿದ ಮೇಲೆ ಇದನ್ನು ಹೇಳಿದರಾ ಸಿಎಂ ಅವರು? ಎಂದು ಕೇಳಿದರು ಮಾಜಿ ಮುಖ್ಯಮಂತ್ರಿಗಳು.

ವಿವೇಕಾನಂದ ಅನ್ನುವವರು ಯಾರು ಅಂತ ಯತೀಂದ್ರ ಅವರು ಯಾಕೆ ಕೇಳಿದರು? ಕ್ಷೇತ್ರದ ಕೆಡಿಪಿ ಸಮಿತಿ ಅಧ್ಯಕ್ಷರಾದ ಅವರಿಗೆ ತಮ್ಮ ‌ಕ್ಷೇತ್ರದ BEO ಯಾರೂ ಎಂದು ಗೊತ್ತಿಲ್ಲವಾ? ಸಿದ್ದರಾಮಯ್ಯನ ಹುಂಡಿ ಗ್ರಾಮದ ಸರಕಾರಿ ಶಾಲೆಗೂ ಯಾಕೆ ಹಣ ಕೊಟ್ಟಿಲ್ಲ? ಆ ಶಾಲೆ ಹೇಗಿದೆ ಎನ್ನುವುದು ಇವರಿಗೆ ಗೊತ್ತಿಲ್ಲವಾ? ಅವರ ಊರಿನ ಶಾಲೆ ಫೋಟೋ ಕೊಡಿ ನೋಡೋಣ. ವರಣಾ ನೋಡಿಕೊಳ್ಳಲು ಬೇರೆ ಅಧಿಕಾರಿ ಇದ್ದಾರೆ. ‌ಮಹದೇವ್ ಬಳಿ ಯಾಕೆ ಅದು ಹೋಯಿತು ಎಂದು ಪ್ರಶ್ನೆ ಮಾಡಿದರು.

Bottom Add3
Bottom Ad 2

You cannot copy content of this page