Belagavi NewsBelgaum NewsKannada NewsKarnataka NewsLatest

*ಜೈನ ಮುನಿ ಹತ್ಯೆ ಹಿಂದೆ ಜಿಹಾದಿಗಳ ಕೈವಾಡ: ವಿಎಚ್ ಪಿ ಶಂಕೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಕಾಮಕುಮಾರನಂದ ಜೈನ್ ಮುನಿ ಮಹಾರಾಜರನ್ನು ಭೀಕರವಾಗಿ ಹತ್ಯೆ ಮಾಡಿದ್ದು ಖಂಡನೀಯ. ಇದನ್ನು ಆಳವಾಗಿ ಅಧ್ಯಯನ ಮಾಡಿದಾಗ ಜೀಹಾದಿಗಳ ಸಂಸ್ಕೃತಿ ಯಿಂದ ಮಾತ್ರ ಸಾಧ್ಯ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಕೃಷ್ಣ ಭಟ್ ಹೇಳಿದ್ದಾರೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಣಕಾಸಿನ ವ್ಯವಹಾರಕ್ಕೆ ಜೈನ್ ಮುನಿಗಳ ಹತ್ಯೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಜೈನ್ ಮುನಿಗಳು ಅಹಿಂಸಾ ವಾದಿಗಳು ಅವರು ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವಿಲ್ಲ. ಈ ತನಿಖೆಯು ಅಡ್ಡ ದಾರಿ ಹಿಡಿಯುತ್ತಿದೆ. ಜೀಹಾದಿಗಳು ಯಾವ ರೀತಿ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೂಡಲೇ ಇದನ್ನು ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಇತ್ತೀಚೆಗೆ ಮತಾಂತರ ಕಾಯ್ದೆ ಹಿಂಪಡೆಯುವ ಸರಕಾರದ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ಮಾಡಲು ಆಗಮಿಸುತ್ತಿದ್ದ ಸ್ವಾಮೀಜಿಯೊಬ್ಬರ ಸೇವಕರು, ವಾಹನ ಚಾಲಕ ಕಾಕತಿಯ ಹೆದ್ದಾರಿಯಲ್ಲಿ ಅಪಘಾತದಲ್ಲಿ ಮೃತಪಟ್ಟರು. ಅಲ್ಲದೆ ಸ್ವಾಮೀಜಿ ಗಂಭೀರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಸರಕಾರ ಪರಿಹಾರ ಕೊಡಬೇಕು. ಚಿಕಿತ್ಸೆ ಪಡೆಯುತ್ತಿರುವ ಸ್ವಾಮೀಜಿ ಅವರಿಗೂ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.


ಗೋವುಗಳ‌ ರಕ್ಷಣೆ ಮಾಡುವ ಸ್ವಾಮೀಜಿಗೆ ಅಪಘಾತವಾದರೂ ಅವರಿಗೆ ಪರಿಹಾರ ಕೊಡುವ ಮನಸ್ಸು ಮಾಡದ ಸರಕಾರ ಅನ್ಯ ಸಮಾಜದವರಿಗೆ ಕೇಳದೆ ಲಕ್ಷಾಂತರ ರೂ. ಪರಿಹಾರ ನೀಡುವ ಸರಕಾರದ ಮೇಲೆ‌ ಹಿಂದೂಗಳು ನಂಬಿಕೆ ಇಡುವುದು ಬೇಡ. ಪ್ರತಿಯೊಬ್ಬ ಹಿಂದೂ 11 ರೂ. ಜಮಾ ಮಾಡಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡುವ ಜವಾಬ್ದಾರಿ ನಮ್ಮದು ಎಂದರು.


ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಚಿಕ್ಕೋಡಿ ತಾಲೂಕಿನ ಹಿರೇಕೋಡಿ ‌ಮುನಿ ಹತ್ಯೆ ಮಾಡಿದ್ದು ಖಂಡನೀಯ. ಇಂಥ ಘಟನೆಗಳು ಯಾವ ಸಮುದಾಯದವರಿಗೂ ಆಗಬಾರದು. ಸರಕಾರ ಹತ್ಯೆ ಮಾಡಿದ ಆರೋಪಿಗಳನ್ನು ವಿಚಾರಣೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.


ತೇಜ ಪ್ರತಿ ಭೀಮಪೀಠದ ಹರಿಗುರು ಮಹಾರಾಜ ಮಾತನಾಡಿ, ಸಾಧು, ಸಂತರ ಹತ್ಯೆ ಮಾಡಿ‌ ಜೀಹಾದಿಗಳು ವಿಕೃತಿ ಮೆರೆದರೆ ಹಿಂದೂತ್ವ ನಾಶವಾಗುವುದಿಲ್ಲ. ಎಲ್ಲ ಸಾಧು, ಸಂತರು ಮಠಗಳನ್ನು ಬಿಟ್ಟು ಹಿಂದುತ್ವ ಕಟ್ಟಲು ಹೊರಗಡೆ ಬಂದು‌ ಹೋರಾಡಬೇಕು ಎಂದರು‌.
ಬರುವ ದಿನಗಳಲ್ಲಿ‌ ಹಿಂದುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಕೈಯಲ್ಲಿದೆ. ಹಿಂದುಗಳು ಮನೆಯಲ್ಲಿ‌ ಕುಳಿತುಕೊಂಡರೆ ಹಿಂದು ಧರ್ಮ ಉಳಿಯುವುದಿಲ್ಲ. ಜಾಗೃತಿಯಾಗಬೇಕು ಎಂದು ಕರೆ ನೀಡಿದರು.


ಜೈನ್ ಮುನಿ ಹತ್ಯೆ ಮಾಡಿದ್ದು ಖಂಡನೀಯ. ಈಗಲಾದರೂ ಎಚ್ಚೆತ್ತುಕೊಂಡು ಹಿಂದುಗಳ‌ ಸಂರಕ್ಷಣೆ ಮಾಡುವ ಅಗತ್ಯ ಇದೆ ಎಂದರು.

ಕೇದಾರ ಪೀಠದ ಮುತ್ನಾಳ ಶಾಖೆಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಆನಂದ ಕರಲಿಂಗನ್ನವರ, ರವಿರಾಜ, ಸೀಮಾ ಹಣಮಣ್ಣವರ್ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button