Latest

ಭಾರಿ ಮಳೆಯಿಂದ ಭೂ ಕುಸಿತ; 12 ಜನ ಕಣ್ಮರೆ

ಪ್ರಗತಿವಾಹಿನಿ ಸುದ್ದಿ; ಕಠ್ಮಂಡು: ಭಾರೀ ಮಳೆಯಿಂದಾಗಿ ನೇಪಾಳದಲ್ಲಿ ಭೂ ಕುಸಿತವುಂಟಾಗಿದ್ದು, ಹಲವು ಮನೆಗಳು ನೆಲಸಮವಾಗಿವೆ. 12ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ನೇಪಾಳದ ಸಿಂಧುಪಾಲ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದ್ದು, ಮನೆಗಳ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ 18 ಮನೆಗಳು ನೆಲಸಮವಾಗಿವೆ. 12 ಜನರು ಕಣ್ಮರೆಯಾಗಿದ್ದಾರೆ.

ಭದ್ರತಾ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಮಣ್ಣಿನ ಅವಶೇಷಗಳಡಿ ಸಿಲುಕಿದವರನ್ನು ಹೊರ ತೆಗೆಯಲಾಗುತ್ತಿದೆ.

Home add -Advt

Related Articles

Back to top button