ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಪಟ್ಟಣದ ಹೊರವಲಯದಲ್ಲಿ ಕಳೆದ ಕೆಲ ತಿಂಗಳುಗಳ ಹಿಂದೆಯಷ್ಟೇ ಅಭಿವೃದ್ಧಿಗೊಂಡ ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯ ಮೇಲ್ಪದರ ಕಿತ್ತುಹೋಗಿದೆ. ಕಳಪೆ ಕಾಮಗಾರಿಯ ಕಾರಣ ಪ್ರಮುಖ ಹಾಗೂ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರಸ್ತೆಯ ನಟ್ಟ ನಡುವೆ ದೊಡ್ಡ ಗಾತ್ರದ ಕಂದಕಗಳು ನಿರ್ಮಾಣಗೊಂಡಿವೆ. ಇದರಿಂದ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ತಾಲ್ಲೂಕಿನ ವಿಶ್ರಾಂತವಾಡಿ, ಬಾಚೋಳಿ, ರಾಮಗುರವಾಡಿ ಮತ್ತು ನಾಗುರ್ಡಾ ಗ್ರಾಮಸ್ಥರು ದೂರಿದ್ದಾರೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಲೋಕೋಪಯೋಗಿ ಇಲಾಖೆಯ ದಾಖಲೆಗಳ ಪ್ರಕಾರ ರಾಜ್ಯ ಹೆದ್ದಾರಿ ಸಂಖ್ಯೆ 13ರ 188.60 ಕಿಮೀಯಿಂದ 203.80 ಕಿಮೀ ವರೆಗೆ ಒಟ್ಟು 15.20 ಕಿಮೀ ಅಂತರವನ್ನು 1888 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಹೇಳಲಾಗುತ್ತದೆ ಆದರೆ ವಾಸ್ತವದಲ್ಲಿ ಖಾನಾಪುರ ಪಟ್ಟಣದ ಬಸವೇಶ್ವರ ವೃತ್ತದಿಂದ ಶುಭಂ ಗಾರ್ಡನ್ ವರೆಗೆ ಒಟ್ಟು 2 ಕಿಮೀ ದೂರದ ರಸ್ತೆಯನ್ನು ಮರುನಿರ್ಮಿಸಲಾಗಿದೆ.
ಉಳಿದ ಕಡೆಗಳಲ್ಲಿ ರಸ್ತೆಯ ಅಭಿವೃದ್ಧಿ ನಡೆದಿಲ್ಲ. ಹೀಗಾಗಿ 1888 ಲಕ್ಷ ವೆಚ್ಚದಲ್ಲಿ ನಡೆದ ರಸ್ತೆ ಕಾಮಗಾರಿ ಕೆಲವೇ ತಿಂಗಳುಗಳಲ್ಲಿ ಹಾಳಾಗಿರುವುದನ್ನು ಪ್ರಮುಖ ಕಾರಣವನ್ನು ಬಹಿರಂಗಪಡಿಸಬೇಕು ಎಂದು ಸ್ಥಳೀಯರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಗುತ್ತಿಗೆದಾರರು ಈ ರಸ್ತೆಯ ಕಾಮಗಾರಿಯನ್ನು ಅರ್ಧಂಬರ್ಧ ಕೈಗೊಂಡಿದ್ದಾರೆ. ದಾಖಲೆಗಳಲ್ಲಿ ಹೇಳಿದಂತೆ 15 ಕಿಮೀ ಅಂತರದ ಕೆಲಸ ನಡೆದಿಲ್ಲ. ಕೇವಲ 2 ಕಿಮೀ ಅಂತರದ ಕೆಲಸ ಮಾತ್ರ ಪೂರ್ಣಗೊಂಡಿದೆ. ಅದರಲ್ಲೂ ನಾಲ್ಕೈದು ಕಡೆಗಳಲ್ಲಿ ದೊಡ್ಡ-ದೊಡ್ಡ ಗುಂಡಿಗಳು ಬಿದ್ದಿವೆ. ಈ ರಸ್ತೆಯ ಪೈಕಿ 8 ಕಿಮೀ ಅಂತರದ ರಸ್ತೆ ಇನ್ನೂ ಸಿಂಗಲ್ ರಸ್ತೆಯಾಗಿಯೇ ಇದೆ.
ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ರಸ್ತೆ ಕಾಮಗಾರಿಯತ್ತ ನಿರ್ಲಕ್ಷ ವಹಿಸಿದ್ದರಿಂದ ಇದೊಂದು ಕಳಪೆ ಕಾಮಗಾರಿಯಾಗಿ ಮಾರ್ಪಟ್ಟಿದೆ.
ಈ ಕಾಮಗಾರಿಯ ಬಗ್ಗೆ ಇಲಾಖೆಯ ಮೇಲಧಿಕಾರಿಗಳು ಮತ್ತು ಲೋಕಾಯುಕ್ತರು ತನಿಖೆ ನಡೆಸಬೇಕು ಎಂದು ನಾಲ್ಕೂ ಗ್ರಾಮಗಳ ನಾಗರಿಕರು ಆಗ್ರಹಿಸಿದ್ದಾರೆ.
*ಮುಂದಿನ ಬಜೆಟ್ ನಲ್ಲಿ ರೈತರ ಪರವಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
https://pragati.taskdun.com/sri-shivayogeshwar-rural-ayurvedic-medical-collegesilver-jubileeinaugurate-yatri-niwas-buildingcm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ