ಪ್ರಗತಿವಾಹಿನಿ ಸುದ್ದಿ; ಶ್ರೀನಗರ: ಪೊಲೀಸ್ ವಾಹನ ಸ್ಕಿಡ್ ಆದ ಪರಿಣಾಮ ನದಿಗೆ ಉರುಳಿಬಿದ್ದಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟು,ನಾಲ್ವರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ.
ಪೂಂಚ್ ನ ಬಫ್ಲಿಯಾಜ್ ಪ್ರದೇಶದಲ್ಲಿರುವ ಡ್ರೋಗ್ಜಿಯನ್ ಎಂಬ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೂಂಚ್ ನ ಹಿರಿಯ ಪೊಲೀಸ್ ಅಧಿಕಾರಿಗಳ ಬೆಂಗಾವಲು ವಾಹನ ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ.
ವಾಹನದಲ್ಲಿ ಒಟ್ಟು 6 ಸಿಬ್ಬಂದಿಗಳಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ 6 ಸಿಬಂದಿಗಳನ್ನೂ ಸುರನ್ ಕೋಟೆಯ ಉಪ-ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಓರ್ವ ಪೊಲೀಸ್ ಮೃತಪಟ್ಟಿದ್ದರೆ, ಇನ್ನೋರ್ವ ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮಹಿಳೆಯರ ಮಾರಾಟ ಪ್ರಕರಣ; ಆರೋಪಿಯನ್ನು ಬಂಧಿಸಿದ ತಾಲಿಬಾನ್ ಪಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ