ಪ್ರಗತಿವಾಹಿನಿ ಸುದ್ದಿ; ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮತ್ತೊಮ್ಮೆ ಭಾರೀ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರ ಯತ್ನ ವಿಫಲವಾಗಿದೆ. ಈ ಮೂಲಕ ಭಯಂಕರ ಅನಾಹುತವೊಂದು ತಪ್ಪಿದಂತಾಗಿದೆ.
ಉಗ್ರರು ಪುಲ್ವಾಮಾದಲ್ಲಿ ಅದೇ ಮಾದರಿಯ ಸುಧಾರಿತ ಐಇಡಿಯನ್ನು ಸೈನಿಕರ ವಾಹನಗಳ ಮೇಲೆ ಸ್ಫೋಟಿಸಲು ಮುಂದಾಗಿದ್ದರು ಎನ್ನಲಾಗಿದೆ. ಯೋಧರ ವಾಹನಗಳು ಸಂಚರಿಸುವ ರಸ್ತೆ ಹಾಗೂ ಸೇತುವೆ ಅಡಿಯಲ್ಲಿ ಐಇಡಿಗಳನ್ನು ಇರಿಸಿದ್ದರು. ಇದನ್ನು ಪತ್ತೆಹಚ್ಚುವಲ್ಲಿ ಯೋಧರು ಯಶಸ್ವಿಯಾಗಿದ್ದು, ಸ್ಫೋಟಕಗಳನ್ನು ವಶಕ್ಕೆ ಪಡೆದು, ನಡೆಯಲಿದ್ದ ಭಾರೀ ಅನಾಹುತ ತಪ್ಪಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ತುಜಾನ್ ಗ್ರಾಮದ ಸೇತುವೆಯ ಅಡಿಯಲ್ಲಿ ಉಗ್ರರು ಇರಿಸಿದ್ದ ಆಧುನಿಕ ಸ್ಫೋಟಕವನ್ನು ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದು ಭಾರತೀಯ ಸೇನಾ ಸಿಬ್ಬಂದಿ ಈ ಸೇತುವೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಈ ಸೇತುವೆ ಕೆಳಗೆ ಉಗ್ರರು ಸುಧಾರಿತ ಸ್ಫೋಟಕ ಸಾಧನಗಳನ್ನು ಇರಿಸಿದ್ದರು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ