Karnataka NewsLatestNational

*ಇಬ್ಬರು ಪೊಲೀಸರ ಹತ್ಯೆ*: *6 ಶಂಕಿತರು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಕಾಶ್ಮೀರದಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ನಡೆದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಆರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಪೊಲೀಸ್ ಅಧಿಕಾರಿಗಳ ಮೃತದೇಹಗಳ ತುಂಬಾ ಗುಂಡೇಟಿನ ಗುರುತುಗಳು ಪತ್ತೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 6 ಶಂಕಿತರನ್ನ ಅಧಿಕಾರಿಗಳು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ಹುತಾತ್ಮರಾದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳನ್ನ ಬಾಬಿ ಚಂದ್ (57) ಹಾಗೂ ವರ್ಷದ ರಾಶ್ಪಾಲ್ ಕುಮಾರ್ (45). ನವೆಂಬರ್‌ 11 ರಂದು ಇವರಿಬ್ಬರು ದಚ್ಚನ್‌ (Dachhan) ಅರಣ್ಯ ಪ್ರದೇಶದಿಂದ ನಾಪತ್ತೆಯಾಗಿದ್ದರು. ಅದೇ ದಿನ ಉಗ್ರರು ಕುಲ್ಗಾಮ್‌ನ ಸಿಆರ್‌ಪಿಎಫ್‌ ಚೆಕ್‌ಪೋಸ್ಟ್‌ ಮೇಲೆ ದಾಳಿ ನಡೆಸಿದ್ದರು.

ಮರ್ವಾದಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ತಂಡಗಳು ಕಾನೂನುಬದ್ಧವಾಗಿ ವೈದ್ಯಕೀಯ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಿದ ನಂತರ, ಶುಕ್ರವಾರ (ಇಂದು) ಮೃತದೇಹಗಳನ್ನ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು. ದುರ್ಗಮ ಹಾದಿಯಿಂದ ಕೂಡಿದ ದಚ್ಚನ್ ಪ್ರದೇಶದಿಂದ ಸುಮಾರು 12 ರಿಂದ 15 ಕಿಮೀ ದೂರದ ಹಳ್ಳಿಗೆ ಕಾಲ್ನಡಿಗೆಯಲ್ಲೇ ಮೃತದೇಹಗಳನ್ನ ಹೊತ್ತು ಸಾಗಿಸಲಾಯಿತು.

ಬಾಬಿ ಚಂದ್ ಮತ್ತು ರಾಶ್ಪಾಲ್ ಕುಮಾರ್ ದಚ್ಚನ್‌ನ ಕಿಯಾರ್ ಗ್ರಾಮದಲ್ಲಿ ಸ್ಥಳೀಯ ಪೊಲೀಸರ ‘ಸ್ಪೆಷಲ್ ಆಪರೇಷನ್ಸ್ ಗ್ರೂಪ್’ (SOG) ನಲ್ಲಿ ನಿಯೋಜಿತರಾಗಿದ್ದರು. ಗಸ್ತಿನಲ್ಲಿದ್ದ ಅವರು ನವೆಂಬರ್‌ 11ರಂದು ತಮ್ಮ ಶಿಬಿರದಿಂದ ದೆಹರ್ನಾ-ಮರ್ವಾ ಸೇನಾ ನೆಲೆಗೆ ತೆರಳುತ್ತಿದ್ದರು. ಈ ವೇಳೆ ನಾಪತ್ತೆಯಾಗಿದ್ದರು. ನವೆಂಬರ್‌ 12 ರಂದು ಬೆಳಗ್ಗೆ ಗುಂಡಿನ ದಾಳಿಗೆ ಗುರಿಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆದ್ರೆ ಇಬ್ಬರು ಅಧಿಕಾರಿಗಳ ಬಳಿಯಿದ್ದ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ.

ಅಧಿಕಾರಿಗಳ ಪ್ರಕಾರ, ಹತ್ಯೆಗೀಡಾದ ಇಬ್ಬರು ಪೊಲೀಸರ ಬಳಿಯಿದ್ದ ಸರ್ಕಾರಿ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ. 1 ಇನ್ಸಾಸ್ (INSAS) ರೈಫಲ್ ಮತ್ತು ಒಂದು 303 ರೈಫಲ್ ಹಾಗೂ ಕೆಲವು ಮ್ಯಾಗಜೀನ್‌ಗಳು ಮತ್ತು ಮದ್ದುಗುಂಡುಗಳು ನಾಪತ್ತೆಯಾಗಿವೆ. ಇವುಗಳನ್ನು ಉಗ್ರೆರೇ ಕೊಂಡೊಯ್ದಿರಬಹುದು ಎಂದು ಶಂಕಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button