Latest

*ಜನಾರ್ಧನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಯಾರ ವಿರುದ್ಧ ಸ್ಪರ್ಧಿಸಲಿದ್ದಾರೆ ಗೊತ್ತಾ?*

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಮುಂಬರು ವಿಧಾನಸಭಾ ಚುನಾವಣೆಗೆ ಸ್ವಂತ ಪಕ್ಷ ಕಟ್ಟಿ ಭರ್ಜರಿ ಸಿದ್ಧತೆ ನಡೆಸಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ, ಇದೀಗ ಬಳ್ಳಾರಿ ಕ್ಷೇತ್ರದಿಂದ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧ ಪತ್ನಿ ಅರುಣಾ ಲಕ್ಷ್ಮಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಜನಾರ್ಧನ ರೆಡ್ಡಿ, ಬಳ್ಳಾರಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ನನ್ನ ಪತ್ನಿ ಅರುಣಾ ಲಕ್ಷ್ಮಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸುತ್ತಿದ್ದೇನೆ ಎಂದರು.

ನಾನು ಯಾರ ಮೇಲೂ ಪ್ರತಿಕಾರ ತೀರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿಲ್ಲ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೇವಲ ಒಂದು ತಿಂಗಳ ಕೂಸು. ಒಂದು ತಿಂಗಳ ಕೂಸು ಇಂದು ರಾಜ್ಯದ ಎಲ್ಲಾ ಪಕ್ಷಗಳ ನಿದ್ದೆಗೆಡಿಸಿದೆ ಎಂದು ಹೇಳಿದರು.

ಓರ್ವ ಸಾಮಾನ್ಯ ಪೊಲೀಸ್ ಕಾನ್ಸ್ ಟೆಬಲ್ ಮನೆಯಲ್ಲಿ ಹುಟ್ಟಿದವನು ನಾನು. ಲಕ್ಷ್ಮಿ ತಾಯಿ ಕೃಪೆಯಿಂದ ಶ್ರೀಮಂತನಾಗಿದ್ದೇನೆ. ಹೆಲಿಕಾಪ್ಟರ್ ಖರೀದಿಸಿದ್ದಕ್ಕೆ ಬಹಳ ದೊಡ್ಡದಾಗಿ ಮಾತನಾಡಿದರು. ಸಮಯ ಉಳಿಸುವುದಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದೆ. ನನ್ನ ಬಂಧನದ ಬಳಿಕ ನನ್ನ ಮಕ್ಕಳನ್ನು ಕೂಡ ಎಂದೂ ಹೆಲಿಕಾಪ್ಟರ್ ಹತ್ತಿಸಿಲ್ಲ. ಕಷ್ಟ, ಬಡತನ ಎಂದರೇನು ಎಂಬುದು ನನಗೆ ಚನ್ನಾಗಿಯೇ ಅರಿವಿದೆ ಎಂದು ಹೇಳಿದರು.

ಸುಮಾರು 12 ವರ್ಷಗಳ ಕಾಲ ವನವಾಸ ಅನುಭಸಿದ್ದೇನೆ, ಏನೆಲ್ಲ ಅವಮಾನಗಳನ್ನು ಎದುರಿಸಿದೆ. ಈಗ ನನ್ನ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಬೆದರಿಕೆಯೊಡ್ದುತ್ತಿದ್ದಾರೆ. ನಾನು ಯಾರಿಗೂ ಹೆದರಲ್ಲ, ಯಾರಿಗೂ ಬಗ್ಗಲ್ಲ. ದೃಢಸಂಕಲ್ಪ ಮಾಡಿದ್ದೇನೆ ಪ್ರಾಣ ಹೋದರೂ ಕೊಟ್ಟ ಮಾತು ತಪ್ಪುವುದಿಲ್ಲ ಈ ರೆಡ್ದಿ. ನಾನು ನನ್ನ ಗುರಿ ಯನ್ನು ಮುಟ್ಟಿಯೇ ಮುಟ್ಟುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂಬಿಕೆಯಿದೆ ಎಂದು ಹೇಳಿದರು.

ಅಂಜನಾದ್ರಿ ಬೆಟ್ಟ ಹನುಮಹುಟ್ಟಿದ ನಾಡು. ಅಂಜನಾದ್ರಿ ಅಭಿವೃದ್ಧಿಗಾಗಿ 5 ಕೋಟಿ ಯೋಜನೆ ಸಿದ್ಧಪಟಿಸಿದ್ದೇನೆ. ಗಂಗಾವತಿಯಲ್ಲಿ 200 ಬೆಡ್ ಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇನೆ. 10-15 ಜಿಲ್ಲೆಗಳ ಜನರು ನಮ್ಮ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಜನರ ಶಕ್ತಿ ನನಗೆ ಆನೆ ಬಲ ತರುತ್ತಿದೆ. ನನಗೆ ಶಕ್ತಿ ನೀಡಿ ಸರ್ಕಾರವನ್ನೇ ನಿಮ್ಮ ಮನೆ ಬಾಗಿಲಿಗೆ ಬರುವಂತೆ ಮಾಡುತ್ತೇನೆ ಎಂದು ಹೇಳಿದರು.

*ಹೈಸ್ಕೂಲು ವಿದ್ಯಾರ್ಥಿ ಆತ್ಮಹತ್ಯೆ; ಬಾಲಕನ ದುಡುಕಿನ ನಿರ್ಧಾರಕ್ಕೆ ಕಾರಣವೇನು?*

https://pragati.taskdun.com/14years-boy9th-studentssuicidemangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button