Kannada NewsKarnataka NewsLatest

ಬೆಲ್ಲದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತೆ ಬಗ್ಗೆ ಜನ ಜಾಗೃತಿ ಜಾಥಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂಚಾರ ಪಾಲನೆ ಹಾಗೂ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ನಗರದ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗುರುವಾರ ವಿವಿಧೆಡೆ ಮೆರವಣಿಗೆಯಲ್ಲಿ ತೆರಳಿ ಜನ ಜಾಗೃತಿ ಮೂಡಿಸಿದರು.
ವಾಹನ ಸಂಚಾರದ ವೇಳೆ ಅಗತ್ಯವಾದ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸುವಂತೆ ಅರಿವು ಮೂಡಿಸಿದ ವಿದ್ಯಾರ್ಥಿಗಳು ಸುರಕ್ಷತೆ ಬಗ್ಗೆ ಕುರುಡಾಗಬೇಡಿ, ಸುರಕ್ಷತೆಯ ಮನಸ್ಸಿನವರಾಗಿರಿ, ನಿಮ್ಮ ಜೀವನವನ್ನು ವೇಗದ ಚಾಲನೆಗೆ ಇಡುವ ಮೂಲಕ ಅಮೂಲ್ಯ ಜೀವವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ, ಬೈಕ್ ಸವಾರಿ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂಬ ಘೋಷವಾಕ್ಯದ ಫಲಕವನ್ನು ಹಿಡಿದು ತಿಳಿವಳಿಕೆ ಮೂಡಿಸಿದರು.
ವಾಹನ ಸಂಚಾರದ ಸುರಕ್ಷತಾ ಕ್ರಮವಾಗಿ ಸರಕಾರಗಳು ಈಗಾಗಲೇ ಹಲವು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿವೆ, ಆದರೂ ವಾಹನ ಸವಾರರು ವೇಗವಾಗಿ ವಾಹನ ಚಲಾಯಿಸುವ ಮೂಲಕ ಜೀವ ಕಳೆದುಕೊಳ್ಳುತ್ತಿರುವುದು ದುರಂತ. ಕೇಂದ್ರ ಸರಕಾರ ಹೊಸದಾಗಿ ಮೋಟಾರು ವಾಹನ ಕಾಯಿದೆಯನ್ನು ಜಾರಿಗೆ ತಂದಿದ್ದು, ಸವಾರರು ತಪ್ಪದೇ ಸರಕಾರ ಜಾರಿಗೆ ತಂದಿರುವ ಕಾನೂನುಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಪ್ರಾಧ್ಯಾಪಕರಾದ ಎಂ.ಎಸ್. ಅಲ್ಲಪ್ಪನವರ, ತಿಪ್ಪಣ್ಣ ಬಡಿಗೇರ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಿಂದ ಲಿಂಗರಾಜ ಕಾಲೇಜು, ಕಾಲೇಜು ರಸ್ತೆ, ಚನ್ನಮ್ಮ ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿ ಅರಿವು ಮೂಡಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button