ಗ್ರಾಮ ದೇವತೆ ನೀಲಗಂಗಾ ದೇವಿಯ ಜಾತ್ರಾ ಮಹೋತ್ಸವ

ಪ್ರಗತಿವಾಹಿನಿ ಸುದ್ದಿ, ಸಿಂದಗಿ – ಸಿಂದಗಿ ಪಟ್ಟಣದ ಗ್ರಾಮ ದೇವತೆ ಶ್ರೀ ನೀಲಗಂಗಾ ದೇವಿಯ ಅಡ್ಡ ಪಲ್ಲಕ್ಕಿ ಉತ್ಸವವು ಅತ್ಯಂತ ವಿಜೃಂಭಣೆಯಿಂದ ಸೋಮವಾರ ಜರುಗಿತು.
ಪಟ್ಟಣದ ಸಾರಂಗಮಠದ ಶ್ರೀ ಪ್ರಭು ಸಾರಂಗದೇವ ಶಿವಾಚಾರ್ಯರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ ಮೂಲ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ವಿರಾಜಮಾನಳಾದ ತಾಯಿ
ನೀಲಗಂಗಾದೇವಿಯ ಮೆರವಣಿಗೆಯು ಸಕಲ ವಾದ್ಯವೈಭವಗಳೊಂದಿಗೆ ಹಳೆಯ ಬಜಾರದ ಮೂಲಕ ಬಸವಣ್ಣ ದೇವರ ದೇವಸ್ಥಾನದವರೆಗೆ ಉತ್ಸವವು ಸಾಗಿ ಬಂತು.
ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಜಾತ್ರೆಯಲ್ಲಿ ನೇರದಿದ್ದ ಸಾವಿರಾರು ಭಕ್ತರು ಪಲ್ಲಕ್ಕಿ ಮುಂದೆ ಉರುಳು ಸೇವೆ ಮಾಡಿ ಪಲ್ಲಕ್ಕಿ ಮೇಲೆ ಬಾಳೆಹಣ್ಣು, ಉತತ್ತಿ, ಕೊಬ್ಬರಿ, ಚುರಮುರಿ, ಹೂಗಳನ್ನು ಎಸೆದು ಕೃತಾರ್ಥರಾದರೆ ವೀರಭದ್ರ ಅವತಾರದ ಪುರವಂತರು ಸೇವೆ ಸಲ್ಲಿಸಿದರು.
ಸೋಲಾಪುರದ ಸಂಗೀತ ಕಲಾ ಬಳಗ, ಡೊಳ್ಳಿನ ಕಲಾ ತಂಡ, ನಂದಿಕೋಲ ಸೇವೆ, ದಿವಟಗಿ ಸೇವೆ, ಶಹನಾಯಿ, ಸಿಂದಗಿ ನೀಲಗಂಗಾ ಮತ್ತು ಸಂತೋಷ ಮ್ಯೂಜಿಕಲ್ ಬ್ರಾಂಡ್ ಸೇರಿದಂತೆ ಹಲವಾರು ವಾದ್ಯ ಮೇಳಗಳು ಹಾಗೂ ಅನೇಕ ಮನರಂಜನಾ ತಂಡಗಳು ಜಾತ್ರಾ ಮಹೋತ್ಸವದಲ್ಲಿ
ಪಾಲ್ಗೊಂಡಿದ್ದವು.
ದೀಪಾವಳಿ ಪಾಡ್ಯಾದಿನದಂದು ಪುರಾಣ ಕಾರ್ಯದೊಂದಿಗೆ ಪ್ರಾರಂಭಗೊಳ್ಳುವ ಈ ಜಾತ್ರೆ ಇಲ್ಲಿಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಿರಂತರವಾಗಿ ಸಾಗಿ ಬರುತ್ತಿದೆ. ಗೌರಿ
ಹುಣ್ಣಿಮೆಯಿಂದ 5 ದಿನಗಳ ಕಾಲ ಪಟ್ಟಣದ ಅನೇಕ ಕುಟುಂಬಗಳು  ದೇವರಿಗೆ ವಿವಿಧ ಖಾಧ್ಯಗಳನ್ನು ನೈವೇದ್ಯವಾಗಿ ನೀಡಿ ಜಾತ್ರಾ ದಿನದಂದು ಶಾವಿಗೆ, ಹೋಳಿಗೆ, ಕರಿಗಡಬು ಸೇರಿದಂತೆ ಹಲವು ಪಕ್ವಾನ್ನಗಳನ್ನು ಪ್ರಸಾದ ಸಿದ್ದತೆ ಮಾಡಿ ದೇವರಿಗೆ ಅರ್ಪಿಸಿ ತಮ್ಮ ಧಾರ್ಮಿಕ ಕಾರ್ಯವನ್ನು ಮುಕ್ತಾಯ ಮಾಡುತ್ತಾರೆ.
ಈ ಸಂಧರ್ಭದಲ್ಲಿ ಅನೇಕ ಮಹಿಳೆಯರು ಜಾತ್ರೆಯ ಮುನ್ನಾ ದಿನದಂದು ನೀರಾಹಾರ(ಉಪವಾಸ) ವೃತವನ್ನು ಕೈಕೊಂಡು ಜಾತ್ರೆಯ ದಿನದಂದು ಸಾಯಂಕಾಲ ಮುಕ್ತಾಯ ಮಾಡುತ್ತಾರೆ. ಬೇರೆ ಬೇರೆ
ಊರುಗಳಲ್ಲಿರುವ ಸಿಂದಗಿಯ ಹೆಣ್ಣುಮಕ್ಕಳು ತಮ್ಮ ತವರೂರಿಗೆ ಬಂದು ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಹರಕೆಗಳನ್ನು ತೀರಿಸುತ್ತಾರೆ ಎನ್ನುವ ಪ್ರತೀತಿ ಇದೆ.
ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಶಿರುಗೌಡ ದೇವರಮನಿ, ಸುನೀಲ ದೇರವಮನಿ, ಸುಧೀರ ದೇವರಮನಿ, ಊರಿನ ಪ್ರಮುಖರಾದ ಅಶೋಕ ಲೋಣಿ, ಚನ್ನಪ್ಪ ಗೋಣಿ, ಅಶೋಕ ದೇವರಮನಿ, ಸಿ.ಜಿ.ಜೋಗುರ, ಪುರಾಣಿಕ ಹಿರೇಮಠ, ಸಿದ್ದಲಿಂಗ ಕಿಣಗಿ,
ಶಿವಾನಂದ ಬಾಡ, ಭೀಮರಾಯ ಪತ್ತಾರ, ಶ್ರೀಶೈಲ ನಂದಿಕೋಲ, ವಿಶ್ವನಾಥ ಜೋಗುರ, ಅಶೋಕ ಅಲ್ಲಾಪುರ, ಕುಮಾರ ಪಟ್ಟಣಶೆಟ್ಟಿ, ಶರಣುಜೋಗುರ, ಮುತ್ತು ಪಟ್ಟಣಶೆಟ್ಟಿ, ಅನೀಲ ಪಟ್ಟಣಶೆಟ್ಟಿ, ಪ್ರಕಾಶ ಗುಣಾರಿ, ಸಂತೋಷ ನಂದಿಕೋಲ, ಪ್ರಶಾಂತ ನಂದಿಕೋಲ, ಶಾಂತು ಗೋಣಿ, ರಾಜು
ಪತ್ತಾರ, ಅನೀಲ ಗೋಣಿ, ಶರಣು ಪಟ್ಟಣಶೆಟ್ಟಿ ಸೇರಿದಂತೆ ಸಹಸ್ರಾರು ಜನ
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button