*ಜಾತ್ರೆ ಹಿನ್ನೆಲೆಯಲ್ಲಿ ಬೆನಕನಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಅಭಿವೃದ್ಧಿ ಕೆಲಸಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಭೂಮಿ ಪೂಜೆಯನ್ನು ನೆರವೇರಿಸಿದರು.
ಗ್ರಾಮದಲ್ಲಿ ಈಗಾಗಲೇ ಜಾತ್ರೆಯ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಮುಖ್ಯ ರಸ್ತೆ, ಮರಾಠಿ ಶಾಲೆಯ ಹಿಂಬಾಗ, ಪಾಟೀಲ ಗಲ್ಲಿ, ಪುಂಡಲೀಕ್ ಕಾಲೋನಿ, ಸುಭಾಷ್ ಗಲ್ಲಿ ಮುಂತಾದ ಸ್ಥಳಗಳಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಗಟಾರ್ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ನಡೆಸಲಾಯಿತು.
ಇದೇ ವೇಳೆ, ಜಾತ್ರಾ ಮಹೋತ್ಸವದ ಕುರಿತು ಗ್ರಾಮಸ್ಥರೊಂದಿಗೆ ಸಚಿವರು ಸುಧೀರ್ಘವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಬಾಳು ದೇಸೂರಕರ್, ಮೋನಪ್ಪ ಪಾಟೀಲ, ಕಲ್ಲಪ್ಪ ದೇಸೂರಕರ್, ಮಹೇಶ ಕೋಲಕಾರ, ಮೀನಾಕ್ಷಿ ಪಾಟೀಲ, ಸಿಪಿಐ ಹಿರೇಮಠ್, ಮದನ, ಪಾಟೀಲ, ಗುತ್ತಿಗೆದಾರ ಸಚಿನ್ ಸಾಮಜಿ, ಜ್ಯೋತಿಬಾ ದೇಸೂರಕರ್, ರಘು ಖಂಡೇಕರ್, ಮೋಹನ್ ಕಾಂಬಳೆ, ದಂಡಗಲ್ಕರ್, ರಾಜೇಶ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ದೇವಸ್ಥಾನ ಕಮಿಟಿ ಯವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ