Latest

ಉದುರುತ್ತಿವೆ ‘ದಳ’ಗಳು; ಜೆಡಿಎಸ್ ಗೆ ರಾಜೀನಾಮೆ ಘೋಷಿಸಿದ ಮತ್ತೋರ್ವ ಶಾಸಕ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಹಿರಿಯ ಶಾಸಕ ಜಿ.ಟಿ.ದೇವೇಗೌಡರ ಬಳಿಕ ಜೆಡಿಎಸ್ ನ ಒಂದೊಂದೇ ಶಾಸಕರು ರಾಜೀನಾಮೆ ಹಾದಿ ಹಿಡಿದಿದ್ದು, ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದಾರೆ. ಶಾಸಕ ಶ್ರೀನಿವಾಸಗೌಡ ಇದೀಗ ಜೆಡಿಎಸ್ ಗೆ ಗುಡ್ ಬೈ ಹೇಳಿದ್ದು, ಕಾಂಗ್ರೆಸ್ ನತ್ತ ಮುಖ ಮಾಡುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸಗೌಡ, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ರಾಜ್ಯಾಧ್ಯಕ್ಷರಿಗೆ ಸೂಚಿಸಿರುವುದಾಗಿ ತಿಳಿದುಬಂತು. ಪಕ್ಷದಲ್ಲಿ ತೀರಾ ಅವಮಾನ ಮಾಡಿಸಿಕೊಂಡು ಇರುವುದು ಸರಿಯಲ್ಲ. ಉಚ್ಛಾಟನೆ ಮಾಡುವ ಮೊದಲು ನಾನೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.

ಪಕ್ಷದಲ್ಲಿನ ಕೆಲ ಕಹಿ ಘಟನೆಗಳಿಂದ ನೋವಾಗಿದೆ. ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ಬರಲು ರಮೇಶ್ ಕುಮಾರ್ ಹಾಗೂ ಕೃಷ್ಣಭೈರೇಗೌಡ ಪ್ರಮುಖ ಕಾರಣ. ಈ ವಿಚಾರವಾಗಿ ಅವರಿಗೆ ಹೆಚ್ಚಿನ ಆದ್ಯತೆ ಕೊಟ್ಟೆ. ಇದನ್ನೇ ದೊಡ್ಡದು ಮಾಡಿ ಮಾತನಾಡಿದರು. ಕೆ.ಸಿ ವ್ಯಾಲಿ ನೀರು ಕೊಚ್ಚೆ ನೀರು ಎಂದಿದ್ದಕ್ಕೆ ನಾನು ಪ್ರತಿಕ್ರಿಯಿಸಬೇಕಾಯ್ತು. ಆ ನೀರನ್ನು ನಾನೂ ಕುಡಿದಿದ್ದೇನೆ. ರಾಜಕೀಯ ಪಕ್ಷದಲ್ಲಿ ಇವರ ಕುಟುಂಬವೊಂದೇ ಇರುವುದೇ? ನಾನೂ ಕೂಡ ಕಾಂಗ್ರೆಸ್ ನಲ್ಲಿ ಮಂತ್ರಿಯಾಗಿದ್ದವನು. ನಾನು ಮೊದಲು ಕಾಂಗ್ರೆಸ್ ನಲ್ಲಿಯೇ ಇದ್ದೆ. ಮುಂದೆ ಕೂಡ ಕಾಂಗ್ರೆಸ್ ಸೇರ್ಪಡೆಯಾಗಲು ತೀರ್ಮಾನಿಸಿದ್ದೇನೆ ಎಂದು ಹೇಳಿದರು.

ಜೆಡಿಎಸ್ ಗೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಈಗಾಗಲೇ ಡಿ.ಕೆ.ಶಿವಕುಮಾರ್ ಜೊತೆ ಮಾತುಕತೆ ನಡೆಸಿದ್ದೇನೆ. ಮುಂದೆ ಕಾಂಗ್ರೆಸ್ ನಲ್ಲಿಯೇ ಕಾರ್ಯನಿರ್ವಹಿಸುವ ಬಗ್ಗೆ ನಿರ್ಧರಿಸಿದ್ದಾಗಿ ತಿಳಿಸಿದರು.

ಸಿಎಂ ಬೊಮ್ಮಾಯಿಗೆ ಅರುಣ್ ಸಿಂಗ್ ಫುಲ್ ಮಾರ್ಕ್ಸ್; ಬಿಎಸ್ ವೈ ಪ್ರವಾಸಕ್ಕೂ ಗ್ರೀನ್ ಸಿಗ್ನಲ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button