Kannada NewsKarnataka NewsLatestPolitics

*ದಳಪತಿಗಳಿಗೆ ಬಿಗ್ ಶಾಕ್; 10 ಸದಸ್ಯರು ಕಾಂಗ್ರೆಸ್ ಸೇರ್ಪಡೆ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಜೆಡಿಎಸ್ ಗೆ ಶಾಕ್ ಎದುರಾಗಿದೆ‌. ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರು ಹಿನ್ನೆಲೆ ನಗರ ಸಭೆಯ ಎಲ್ಲಾ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಚನ್ನಪಟ್ಟಣ ನಗರಸಭೆಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಚಿಹ್ನೆಯ ಮೇಲೆ ನಗರ ಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ 9 ಸದಸ್ಯರು ಹಾಗೂ ಚನ್ನಪಟ್ಟಣದ ವಾರ್ಡ್ ನಂ.‌30 ರ ಪಕ್ಷೇತರ ಅಭ್ಯರ್ಥಿ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

ಜೆಡಿಎಸ್ ಪಕ್ಷವು ಕೋಮುವಾದಿ ಪಕ್ಷದ ಜೊತೆ ಕೈ ಜೊಡಿಸಿರುವುದರಿಂದ ಬೇಸತ್ತು ಸ್ವಂತ ಇಚ್ಚೇಯಿಂದ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಹಾಗೂ ನಾಯಕತ್ವವನ್ನು ಒಪ್ಪಿ, ಕೆಪಿಸಿಸಿ ಅಧ್ಯಕ್ಷರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾವುಗಳೆಲ್ಲರೂ ಸೇರಿದ್ದೇವೆ. ನಾವು ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಸದಸ್ಯರು ಒಟ್ಟಾಗಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷವನ್ನು ದಿನಾಂಕ 4-4-2024 ರಂದು ಸೇರಿದ್ದೇವೆ. ನಮ್ಮನ್ನು ಕಾಂಗ್ರೇಸ್ ಸದಸ್ಯರೆಂದು ಗುರುತಿಸಿ ಇತರ ಕಾಂಗ್ರೆಸ್ ಸದಸ್ಯರ ಜೊತೆಗೆ ನಗರಸಭೆಯ ಸಭೆಗಳಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಿ ಎಂದು ರಾಮನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರಿದ ಸದಸ್ಯರ ವಿವರ

ಚನ್ನಪ್ಪಟ್ಟನ ನಗರ ಸಭೆಯ ಅಧ್ಯಕ್ಷ ವಾರ್ಡ್ ನಂ.26 ಪ್ರಶಾಂತ್ ಪಿ.‌ ವಾರ್ಡ್ ನಂ.5 ರ ಸದಸ್ಯ ರೇವಣ್ಣ ಎಂ.ಜೆ, ವಾರ್ಡ್ ನಂ.7 ರ ಸದಸ್ಯ ವಿ ಸತೀಸ್ ಬಾಬು, ವಾರ್ಡ್ ನಂ.‌14 ರ ಸದಸ್ಯ ಶ್ರೀನಿವಾಸಮೂರ್ತಿ. ವಾರ್ಡ್ ನಂ.12 ರ ಸದಸ್ಯ ಲೋಕೇಶ್ ಸಿ.ಜೆ. ವಾರ್ಡ್ ನಂ.11 ಸದಸ್ಯ ನಾಗೇಶ್‌. ವಾರ್ಡ್ ನಂ 24 ರ ಸದಸ್ಯ ಸೈಯದ್ ರಪೀಕ್ ಅಹಮದ್ ಕುನುಮೀರಿ. ವಾರ್ಡ್ ನಂ. 28 ರ ಸದಸ್ಯೆ ಅಭೀದ ಬಾನು. ವಾರ್ಡ್ ನಂ.29 ರ ಸದಸ್ಯೆ ಭಾನುಪ್ರೀಯ ಹಾಗೂ ಪಕ್ಷೇತರ ಸದಸ್ಯೆ ಉಮಾ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button