
ಒಂದೇ ವರ್ಷದಲ್ಲಿ 18 ವಿದ್ಯಾರ್ಥಿಗಳ ಆತ್ಮಹತ್ಯೆ…!
ಪ್ರಗತಿವಾಹಿನಿ ಸುದ್ದಿ; ಜೈಪುರ: ಜೆಇಇ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ಕಳೆದ 48 ಗಂಟೆಯಲ್ಲಿ ಇದು ಎರಡನೇ ಪ್ರಕರಣವಾಗಿದೆ.
ಭಾರ್ಗವ ಮಿಶ್ರಾ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಬಿಹಾರದ ಚಂಪಾರಣ್ಯದ ನಿವಾಸಿಯಾಗಿದ್ದ ಭಾರ್ಗವ ಮಿಶ್ರಾ, ಜೆಇಇ ಪರೀಕ್ಷೆ ತಯಾರಿ ನಡೆಸಲು ಕೋಟಾದಲ್ಲಿನ ಪ್ರಮುಖ ಕೋಚಿಂಗ್ ಸೆಂಟರ್ ಗೆ ಸೇರಿದ್ದ. ಹಾಸ್ಟೇಲ್ ನಲ್ಲಿ ವಾಸವಾಗಿದ್ದ ಭಾರ್ಗವ್ ಮಿಶ್ರಾ ಈಗ ನೇಣಿಗೆ ಶರಣಾಗಿದ್ದಾನೆ.
ಈವರ್ಷ ಒಟ್ಟು 18 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ