
ಪ್ರಗತಿ ವಾಹಿನಿ ಸುದ್ದಿ ಮುಂಬೈ –
ಜಾನ್ ಅಬ್ರಾಹಂ ನಟಿಸಲಿರುವ ಟೆಹ್ರಾನ್ ಚಿತ್ರದ ಚಿತ್ರೀಕರಣ ಸಧ್ಯದಲ್ಲೇ ಸೆಟ್ಟೇರಲಿದ್ದು ತನ್ನ ತಾಯಿ ಅವರನ್ನು ಚಿತ್ರೀಕರಣಕ್ಕೆ ಇರಾನ್‌ಗೆ ಕರೆದೊಯ್ಯುವುದಾಗಿ ಬಾಲಿವುಡ್ ನಟ ಜಾನ್ ಅಬ್ರಾಹಂ ತಿಳಿಸಿದ್ದಾರೆ.
ಜಿಯೋ ಪಾಲಿಟಿಕಲ್ ಥ್ರಿಲ್ಲರ್ ಚಿತ್ರವಾಗಿರುವ ಟೆಹ್ರಾನ್‌ನ ಚಿತ್ರೀಕರಣ ಇರಾನ್‌ನಲ್ಲಿ ನಡೆಯಲಿದೆ. ಚಿತ್ರವನ್ನು ಪ್ರಸಕ್ತ ಫೆಬ್ರವರಿಯಲ್ಲಿ ದಿನೇಶ್ ವಿಜನ್ ಅವರು ಘೋಷಿಸಿದ್ದರು. ಅಶೀಶ್ ಪ್ರಕಾಶ್ ವರ್ಮಾ ಮತ್ತು ರಿತೇಶ್ ಶಾ ಅವರು ಚಿತ್ರಕತೆ ಬರೆದಿದ್ದು ಅರುಣ್ ಗೋಪಾಲನ್ ನಿರ್ದೇಶಿಸಲಿದ್ದಾರೆ.
ಇರಾನ್‌ನಲ್ಲಿ ತನ್ನ ತಾಯಿಯ ೨೧ಕ್ಕೂ ಹೆಚ್ಚು ಸಹೋದರ ಸಂಬಂಧಿಗಳಿದ್ದಾರೆ. ಅಲ್ಲದೇ ಪಾರ್ಸಿಗಳ ಮೂಲವಾದ ಇರಾನ್‌ನಲ್ಲಿ ಮೊದಲ ಭಾರತೀಯ ಚಿತ್ರ ಚಿತ್ರೀಕರಣವಾಗುತ್ತಿರುವುದು ಸಹ ಸಂತಸ ತಂದಿದೆ. ಈ ಎರಡೂ ಕಾರಣಗಳಿಗೆ ಟೆಹ್ರಾನ್ ಚಿತ್ರ ನನ್ನ ಬದುಕಿಗೆ ಮಹತ್ವದ್ದಾಗಲಿದೆ ಎಂದು ನಟ ಜಾನ್ ಅಬ್ರಾಹಂ ತಿಳಿಸಿದ್ದಾರೆ.
ಸ್ವಂತ ಮನೆಯಿಲ್ಲ, ಐಪಿಎಲ್ ಸಂಬಳದಲ್ಲಿ ಮನೆ ಕೊಳ್ಳುತ್ತೇನೆ ಎಂದ ಮುಂಬೈ ಇಂಡಿಯನ್ಸ್‌ನ ತಿಲಕ್ ವರ್ಮಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ