
ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ:  ಬೆಳಗಾವಿ-ಹಳಿಯಾಳ ರಾಜ್ಯ ಹೆದ್ದಾರಿಯ ಮಧ್ಯೆ ಬರುವ ಖಾನಾಪುರ -ನಂದಗಡ ರಸ್ತೆಯ ಮಧ್ಯದಲ್ಲಿರುವ ಕೌಂದಲ್ ಗ್ರಾಮದ ಬಳಿ ಕಬ್ಬಿನ ಟ್ರಕ್ ಮತ್ತು ದ್ವಿಚಕ್ರ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಖಾನಾಪುರ ತಾಲೂಕಿನ ಕಾರಲಗಾ ಗ್ರಾಮದ ಯುವಕ ಗಣೇಶ ಶಾಂತಾರಾಮ ಅಳವಣಿ (24) ಸಾವನ್ನಪ್ಪಿದ ಯುವಕ.
ಖಾನಾಪುರದಿಂದ  ಸ್ವಗ್ರಾಮಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಕಬ್ಬು ತುಂಬಿಕೊಂಡು ಖಾನಾಪುರ ಕಡೆಗೆ ಹೋಗುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ.  ಖಾನಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
				
				
					 
					 
				 
					 
					 
					 
					
 
					


