Cancer Hospital 2
Beereshwara 36
LaxmiTai 5

*ಬೆಳಗಾವಿ: ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನ*

Anvekar 3

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ (ದ) ಜಿಲ್ಲೆಯಲ್ಲಿ ಖಾಲಿ ಇರುವ 13 ಹುದ್ದೆಗಳಿಗೆ ಹಿರಿಯ ಪ್ರಾಥಮಿಕ ಸೆಕೆಂಡರಿ (6 ರಿಂದ 12ನೇ ತರಗತಿ) ಹಂತಕ್ಕೆ ತಾತ್ಕಾಲಿಕವಾಗಿ ನೇರಗುತ್ತಿಗೆ ಅಡಿಯಲ್ಲಿ ವಿಶೇಷ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:
ಬೈಲಹೊಂಗಲ 2, ಕಿತ್ತೂರ 2, ಬೆಳಗಾವಿ ನಗರ 1, ಬೆಳಗಾವಿ ಗ್ರಾಮೀಣ 2, ಖಾನಾಪೂರ 2, ರಾಮದುರ್ಗ 2, ಸವದತ್ತಿ 2, ಒಟ್ಟು 13 ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ:
ಮಾನ್ಯವಾದ RCI CRR ಸಂಖ್ಯೆಯನ್ನು ಹೊಂದಿರುವ RCI ಅನುಮೋದಿತ ಸಂಸ್ಥೆಯಿಂದ ವಿಶೇಷ ಶಿಕ್ಷಣದಲ್ಲಿ B.Ed
ಅಥವಾ

ವಿಶೇಷ ಶಿಕ್ಷಣದಲ್ಲಿ ವಿಶೇಷ B.Ed ಗೆ ಸಮಾನವಾದ RCI ಅನುಮೋದಿತ ಸಂಸ್ಥೆಯಿಂದ ಗುರುತಿಸಲ್ಪಟ್ಟ ಅರ್ಹತೆ (ಪ್ರಮಾಣಪತ್ರ/ಡಿಪ್ಲೊಮಾ) ಹೊಂದಿರುವ B.Ed ಮತ್ತು ಮಾನ್ಯವಾದ RCI CRR ಸಂಖ್ಯೆಯನ್ನು ಹೊಂದಿರಬೇಕು.

Emergency Service

(B.Ed in Special Education from a RCI approved institution with possess a valid RCI CRR number or B.Ed with a recognized qualification (Certificate/Diploma ) from RCI approved institution equivalent to special B.Ed in Special education and possesses a valid RCI CRR number, Six month training of teaching in cross disability area in inclusive education)

ಆಸಕ್ತ ವಿಶೇಷ ಶಿಕ್ಷಕರು ತಮ್ಮ ಅರ್ಜಿಯ ಜೊತೆಗೆ ಎಲ್ಲಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಬೆಳಗಾವಿ ಸಮಗ್ರ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯದಲ್ಲಿ ನಿಗದಿತ ನಮೂನೆಯಲ್ಲಿ ಜು. 25. 2023 ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9480695413ಗೆ ಸಂಪರ್ಕಿಸಬಹುದಾಗಿದೆ ಎಂದು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಬೆಳಗಾವಿ ಸಮಗ್ರ ಶಾಲಾಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bottom Add3
Bottom Ad 2