Belagavi NewsBelgaum NewsKannada NewsKarnataka NewsLatest

*ಅಪರಿಚಿತ ವ್ಯಕ್ತಿ: ಚಿಕಿತ್ಸೆ ಫಲಕಾರಿಯಾಗದೆ ಸಾವು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರೈಲಿನಲ್ಲಿ ಬರುವಾಗ ಅನಾರೋಗ್ಯಕ್ಕೀಡಾಗಿದ್ದ ಅಪರಿಚಿತ ಯುವಕ ಚಿಕಿತ್ಸೆ ಫಲಕಾರಿಯಾಗದೇ ಬೆಳಗಾವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಜುಲೈ.16 ರಂದು ಎಕ್ಸಪ್ರೆಸ್ ರೈಲಿನಲ್ಲಿಪ್ರಯಾಣ ಮಾಡಿಕೊಂಡು ಬರುವಾಗ ಯುವಕನ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅದೇ ದಿನ ಆತ ಮೃತಪಟ್ಟಿದ್ದು ಬೆಳಗಾವಿ ರೈಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Home add -Advt

ಮೃತ ವ್ಯಕ್ತಿಯ ಚಹರೆ ಪಟ್ಟಿ:
ಎತ್ತರ 5.6 ಫೂಟ್, ಕೆಂಪು ಮೈ ಬಣ್ಣ, ಸದೃಡ ಮೈಕಟ್ಟು, ಉದ್ದು ಮುಖ, ನೀಟಾದ ಮೂಗೂ ಹಾಗೂ ಬಲಗೈ ಭುಜದ ಹತ್ತಿರ ಮರಾಠಿಯಲ್ಲಿ ‘’ಆಯಿ’’ ಎಂಬ ಹಚ್ಚೆ ಗುರುತು ಎಡಗೈ ಮೇಲೆ ‘’ಒ’’ ಅಂತಾ ಹಚ್ಚೆ ಗುರುತು ಇರುತ್ತದೆ. ಬಲಗೈಯಲ್ಲಿ ಕೆಂಪು ಮತ್ತು ಕಪ್ಪು ಇದ್ದು, ತಿಳಿ ಹಸಿರು ಬಣ್ಣದ ಹಾಪ್ ಟೀಶರ್ಟ ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ಈ ರೀತಿ ಚಹರೆಯುಳ್ಳ ಅಪರಿಚಿತ ವ್ಯಕ್ತಿಯ ವಾರಸುದಾರರು ಪತ್ತೆಯಾಗಿರುವುದಿಲ್ಲ ಮೃತನ ರಕ್ತ ಸಂಬಂಧಿಗಳು ಯಾರಾದರೂ ಪತ್ತೆಯಾದರೆ ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ: (0831) 2405273 ಪಿ.ಎಸ್.ಐ ಮೊಬೈಲ ನಂ:9480802127 ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. (080) 22871291 ಗೆ ಸಂಪರ್ಕಿಸಬಹುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.


Related Articles

Back to top button