Latest

ಉದ್ಯೋಗ ವಾರ್ತೆ: ಕೇಂದ್ರ ರೈಲ್ವೆ ಇಲಾಖೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರೈಲ್ವೆ ನೇಮಕಾತಿ ಸೆಲ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 2422 ಹುದ್ದೆಗಳ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು 2022ರ ಫೆಬ್ರವರಿ 16ರೊಳಗೆ ಅರ್ಜಿ ಸಲ್ಲಿಸಬಹುದು. ಮುಂಬೈ ಕ್ಲಸ್ಟರ್ ನಲ್ಲಿ 1659, ಭೂಸಾವಲ್ ಕ್ಲಸ್ಟರ್ ನಲ್ಲಿ 418, ಪುಣೆ ರೈಲ್ವೆ ಕ್ಲಸ್ಟರ್ ನಲ್ಲಿ 152, ನಾಗ್ಪುರ ಕ್ಲಸ್ಟರ್ ನಲ್ಲಿ 114 ಹಾಗೂ ಸೊಲ್ಲಾಪುರ ಕ್ಲಸ್ಟರ್ ನಲ್ಲಿ 79 ಹುದ್ದೆಗಳು ಖಾಲಿ ಇವೆ.

ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ 10ನೇ ತರಗತಿಯನ್ನು ಒಟ್ಟಾರೆ ಶೇ.50ರಷ್ಟು ಮಾರ್ಕ್ಸ್ ಗಳೊಂದಿಗೆ ಉತ್ತೀರ್ಣರಾಗಿರಬೇಕು. ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು ಅಥವಾ ತಾತ್ಕಾಲಿಕ ಪ್ರಮಾಣಪತ್ರವನ್ನು ಹೊಂದಿರಬೇಕು.

15 ವರ್ಷ ಮೇಲ್ಪಟ್ಟು 24 ವರ್ಷ ಒಳಗಿನವರು ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ www.rrccr.com ವೆಬ್ ಸೈಟ್ ಕ್ಲಿಕ್ ಮಾಡಿ.
ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button