
ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ನಾಳೆಯಿಂದ ರಾಜ್ಯಾದ್ಯಂತ ಜಾರಿಯಾಗಲಿರುವ ನೈಟ್ ಕರ್ಫ್ಯೂ ಆದೇಶಕ್ಕೆ ಚಿತ್ರರಂಗ, ಹೋಟೇಲ್ ಮಾಲೀಕರು, ವ್ಯಾಪಾರಸ್ತರು ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ನಟ, ನಿರ್ದೇಶಕ ಜೋಗಿ ಪ್ರೇಮ್ ಕಿಡಿಕಾರಿದ್ದು, ಬೇಕು ಬೇಕಂತಲೇ ಇಂತಹ ಆದೇಶ ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಜೋಗಿ ಪ್ರೇಮ್, ಒಮಿಕ್ರಾನ್, ಕೋವಿಡ್ ಎಂದು ನೆಪ ಹೇಳಿ ರಾಜ್ಯ ಸರ್ಕಾರ ನಮ್ಮ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ, ರಾಜಕೀಯ ನಾಯಕರ ಪ್ರಚಾರದ ವೇಳೆ ಇಲ್ಲದ ನಿಯಮ ಈಗ್ಯಾಕೆ? ಬೇಕು ಬೇಕಂತಲೇ ರೂಲ್ಸ್ ಗಳನ್ನು ತಂದು ತೊಂದರೆ ಕೊಡವು ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ, ಸಿನಿಮಾ ಬಿಡುಗಡೆ ಮಾಡುವಂತಹ ಸಂದರ್ಭದಲ್ಲಿ ಇಂತಹ ಟಫ್ ರೂಲ್ಸ್ ಗಳನ್ನು ಜಾರಿ ಮಾಡುವುದರಿಂದ ಚಿತ್ರೋದ್ಯಮಕ್ಕೆ ಅದರಲ್ಲೂ ವಿಶೇಷವಾಗಿ ಕನ್ನಡ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತದೆ. ನಾವು ಕಷ್ಟಪಟ್ಟು ಸಿನಿಮಾ ಮಾಡಿರುತ್ತೇವೆ ವರ್ಷಕ್ಕೆ, ಆರು ತಿಂಗಳಿಗೊಮ್ಮೆ ಚಿತ್ರ ಬಿಡುಗಡೆ ಮಾಡುತ್ತೇವೆ ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುತ್ತೇವೆ ಈಗ ಏಕಾಏಕಿ ಟಫ್ ರೂಲ್ಸ್, ನೈಟ್ ಕರ್ಫ್ಯೂ ಎಂದ ತಕ್ಷಣ ಥಿಯೇಟರ್ ಗಳಿಗೆ ಜನರು ಬರುವುದಿಲ್ಲ. ಜನರ ಓಡಾಟದ ಮೇಲೆ ಕಡಿವಾಣ ಹಾಕಲಾಗುತ್ತಿದೆ. ಚಿತ್ರ ಬಿಡುಗಡೆ ಸಂದರ್ಭದಲ್ಲೇ ಕನ್ನಡ ಚಿತ್ರಗಳಿಗೆ ಏಟು ಬೀಳುವುದರಿಂದ ಪರಭಾಷಾ ಚಿತ್ರಗಳನ್ನು ಅನಿವಾರ್ಯವಾಗಿ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡುವಂತಾಗುತ್ತೆ. ಕರ್ನಾಟಕದಲ್ಲಿ ಕನ್ನಡವೇ ಶೇ.10ರಷ್ಟಾಗುವಂತಾಗಿದೆ. ಇದು ಒಳ್ಳೆಯ ಸಂದೇಶವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಾ ಅಧಿವೇಶನಕ್ಕೂ ಎಂಟ್ರಿಕೊಟ್ಟ ಕೋವಿಡ್; 35 ಜನರಿಗೆ ಕೊರೊನಾ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ