Belagavi NewsBelgaum NewsKannada NewsKarnataka NewsLatestPolitics

ಜೊಲ್ಲೆ ಜನ್ಮದಿನ: ವಿವಿಧ ಸ್ಫರ್ಧೆಗಳ ಆಯೋಜನೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರ ಹುಟ್ಟು ಹಬ್ಬದ ಅಂಗವಾಗಿ ಲೋಕಸಭೆ ಕ್ಷೇತ್ರದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿನ ಪ್ರತಿಭೆಗಳಿಗಾಗಿ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಟ್ಯಾಲೇಂಟ್(ಪ್ರತಿಭೆ) ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹುಟ್ಟು ಹಬ್ಬ ಆಚರಣೆ ಸಮಿತಿ ಅಧ್ಯಕ್ಷ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಅವರು ಸೋಮವಾರ ಪಟ್ಟಣದ ಲೋಕೋಪಯೋಗಿ ಸಭಾಭವನದಲ್ಲಿ ನಡೆದ ಹುಟ್ಟು ಹಬ್ಬ ಆಚರಣೆ ಸಮಿತಿ ಆಯೋಜಿಸಿದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ, ಆಯಾ ವಿಧಾನ ಸಭೆ ಕ್ಷೇತ್ರದಲ್ಲಿ ಸೆ.೨೪ ರಿಂದ ಅ. ೨ರವರೆಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಗ್ರ್ಯಾಂಡ್ ಫೈನಲ್ ಸ್ಪರ್ಧೆಯು ಅ.೭ ರಂದು ಚಿಕ್ಕೋಡಿ ಆರ್.ಡಿ.ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ವಿಜೇತರಿಗೆ ಅ.೮ ರಂದು ನಡೆಯಲಿರುವ ಹುಟ್ಟು ಹಬ್ಬ ಆಚರಣಾ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಸಪ್ಟೆಂಬರ್ ೨೪ ರಿಂದ ಆಕ್ಟೋಬರ್ ೨ ವರೆಗೆ ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳಲ್ಲಿ ನಡೆಯಲಿವೆ. ಸ್ಪರ್ಧೆಯಲ್ಲಿ ಗುಂಪು ನೃತ್ಯ, ಆರ್ಟ್, ಜಾದು, ಸ್ಟಂಟ್, ಸೋಲೋ ನೃತ್ಯ ವಾದ್ಯಗಳು, ಅಥವಾ ಇತರೆ ವಿಶೇಷ ಪ್ರತಿಭೆಗಳನ್ನು ಕೇವಲ ೫ ನಿಮಿಷದಲ್ಲಿ ಪ್ರದರ್ಶಿಸಿದ ವಿಜೇತರಿಗೆ ತಮ್ಮ ಕ್ಷೇತ್ರದಲ್ಲಿ ಮೊದಲನೇ ಬಹುಮಾನ ೨೧,೦೦೦ ಎರಡನೇ ಬಹುಮಾನ ೧೫,೦೦೦ ತೃತೀಯ ಬಹುಮಾನ ೧೦,೦೦೦ ನೀಡಲಾಗುವುದು.

ಕ್ಷೇತ್ರದಲ್ಲಿ ವಿಜೇತರಾದ 8 ಸ್ಪರ್ಧಿಗಳು ಅಕ್ಟೋಬರ ೭ ರಂದು ಚಿಕ್ಕೋಡಿ ಆರ್.ಡಿ.ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಗ್ರ್ಯಾಂಡ್ ಪೀನಾಲೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ೫೧,೦೦೦/- ಎರಡನೇ ಬಹುಮಾನ ೩೧೦೦೦/- ತೃತೀಯ ಬಹುಮಾನ ೨೧,೦೦೦/- ನಗದು ಹಾಗೂ ಸ್ಮರಣಫಲಕ ನೀಡಿ ಗೌರವಿಸಲಾಗುವುದು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ಆಯಾ ಕ್ಷೇತ್ರದಲ್ಲಿ ದೇಶಿ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಿ ಕಲೆ ಉಳಿಸುವ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಾದ ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ, ಯಮಕನಮರಡಿ, ಹುಕ್ಕೇರಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಮುಖಂಡರು ಪಾಲ್ಗೊಂಡು ಹ್ಯಾಜ್ ಟ್ಯಾಲೆಂಟ್ ಸ್ಪರ್ಧೆಯನ್ನು ಆಯೋಜಿಸಲು ತಮ್ಮ ಸಹಮತ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡೆ, ಬಸವಪ್ರಸಾದ ಜೊಲ್ಲೆ, ಪವನ ಪಾಟೀಲ, ವಿಶ್ವನಾಥ ಕಮತೆ, ಪ್ರಣವ ಮಾನವಿ, ಎಂ.ಪಿ.ಪಾಟೀಲ, ದೀಪಕ ಪಾಟೀಲ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.



ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button