ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – ಮಹಾತ್ಮಾ ಗಾಂಧಿಯವರ 150ನೇ ಜಯಂತಿ ನಿಮಿತ್ಯ ಪಕ್ಷದ ಕಾರ್ಯಕ್ರಮದ ಭಾಗವಾಗಿ ನಿಪ್ಪಾಣಿ ಕ್ಷೇತ್ರದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಪಾದಯಾತ್ರೆ ನಡೆಸಿದರು.
ಮಹಾತ್ಮ ಗಾಂಧೀಜಿ ಅವರ 150 ನೇ ಜಯಂತಿ ಅಂಗವಾಗಿ ಪ್ರತಿ ಸಂಸದರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 150 ಕಿ.ಮೀ. ಪಾದಯಾತ್ರೆ ಮಾಡಿ ಗಾಂಧೀಜಿ ತತ್ವಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಸಲಹೆ ಮೆರೆಗೆ ತಾಲೂಕಿನ ಕೊಡ್ನಿ ಗ್ರಾಮದಿಂದ ಸಂಸದ ಅಣ್ಣಾಸಾಹೇಬ ಜೊಲ್ಲೆ ಸಚಿವೆ ಶಶಿಕಲಾ ಜೊಲ್ಲೆ ಪಾದಯಾತ್ರೆ ನಡೆಸಿದರು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಕೊಡ್ನಿ ಯಿಂದ ಪಾದಯಾತ್ರೆ ಆರಂಭಿಸಿ, ಬೂದಿಹಾಳ, ಯಮಗರ್ಣಿ, ನಾಗನೂರ, ಶಿರಪೆವಾಡಿ, ಜತ್ರಾಟ, ಅಕ್ಕೋಳ, ಸಿದ್ನಾಳ, ಹುನ್ನರಗಿ, ಬೆನಾಡಿ, ಆಡಿ, ಭಿವಶಿ ಗ್ರಾಮದಲ್ಲಿ ಪಾದಯಾತ್ರೆ ನಡೆಯಲಿದೆ.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಸಾಧ್ಯವಾದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ 650 ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಗುವುದು. ಪಾದಯತ್ರೆಯಲ್ಲಿ ಗಾಂಧೀಜಿ ಅವರ ತತ್ವ, ವಿಚಾರಧಾರೆ, ಹಾಗೂ ಸ್ವಚ್ಛ ಭಾರತ, ಪ್ಲಾಸ್ಟಿಕ್ ಮಕ್ತ ಸಮಾಜ, ಜಲಶಕ್ತಿ ಸಂರಕ್ಷಣೆ ಮತ್ತು ವ್ಯಸನ ಮುಕ್ತ ಭಾರತದ ಕುರಿತು, ಜನಜಾಗೃತಿ ಮೂಡಿಸಲಾಗುವುದು ಎಂದರು.
ವಿವಿಧ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನೂ ಆಲಿಸಲಾಗುವುದು ಎಂದರು. ಅ ೩೧ ರಂದು ಕುಡಚಿ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಯಲಿದೆ.
ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಚಂದ್ರಕಾಂತ ಕೋಟಿವಾಲೆ, ನಿರ್ದೇಶಕರಾದ ಪಪ್ಪು ಪಾಟೀಲ, ರಾಮಗೊಂಡ ಪಾಟೀಲ, ಎಪಿಎಮ್‌ಸಿ ಅಧ್ಯಕ್ಷರಾದ ಅಮೀತ ಸಾಳವೆ, ಜಯವಂತ ಬಾಟಲೆ, ಸಂಜಯ ಶಿಂತ್ರೆ, ಬಂಡಾ ಘೋರಪಡೆ, ರಾಜು ಕಾನಡೆ, ಗಣಪತಿ ಗಾಡಿವಡ್ಡರ, ನೀತಿಶ ಖೋತ, ರಾಜೇಶ ಕೊಟಡಿಯ, ಸುನೀಲ ಸೆಲಾರ, ಪ್ರಣವ ಮಾನವಿ ,ಆಶಾ ಟವಳೆ, ಮಹಾದೇವಿ ನೆರಳೆ, ವಿಜಯ ಟವಳೆ, ಆಕಾಶ ಶೆಟ್ಟಿ, ಸಂಜಯ ಸಂಕಪಾಳ, ನೀತೀಶ ಖೋತ, ಸಾಗರ ದೇಸಾಯಿ, ದೀಪಕ ಮಾನೆ, ದಾದಾಸೋ ಪೂಜಾರಿ, ಕಿರಣ ನಿಕಾಡೆ, ಭರತ ನಸಲಾಪೂರೆ, ಸದಾಶಿವ ಬೂದಿಹಾಳೆ, ಶ್ರೀಕಾಂತ ಲೊಂಡೆ, ಬಿಜೆಪಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ