Kannada NewsKarnataka NewsLatest

ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕ -ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ​ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು,  ನಮ್ಮ ಸಂಸ್ಕೃತಿ ಹಾಗೂ ಪರಂಪರೆಗಳು ಉಳಿಸಿಕೊಂಡು ಹೋಗುವ ದಿಸೆಯಲ್ಲಿ ದೇವಸ್ಥಾನಗಳನ್ನು ಉಳಿಸಿ ಬೆಳೆಸಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕರೆ ನೀಡಿದ್ದಾರೆ.
ಶೆಗನಮಟ್ಟಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಮಂದಿರದ ಉದ್ಘಾಟ​ನೆ​ ಹಾಗೂ ವಾಸ್ತು​ ​ಶಾಂತಿ​ ಸಮಾರಂಭದಲ್ಲಿ ಭಾಗವಹಿಸಿ​ ಮಾತನಾಡಿದ ಅವರು,  ಜಾತ್ರೆ​,​ ಪುರಾಣ​,​ ಪ್ರವಚನಗಳ ಮೂಲಕ ಸಮಾಜಕ್ಕೆ ಉತ್ತಮವಾದ ಸಂಸ್ಕಾರವನ್ನು ಕಲಿಸಿ ಕೊಡುವುದರಲ್ಲಿ​,ದೇವಸ್ಥಾನಗಳು​ ಪ್ರಮುಖ ಪಾತ್ರ ವಹಿಸುತ್ತವೆ​. ಇವುಗಳಿಂದ ಜನರಿಗೆ ನೆಮ್ಮತಿ, ಶಾಂತಿ ಸಿಗುತ್ತದೆ. ಇವತ್ತಿನ ಯುವ ಪೀಳಿಗೆಗೆ​ ಈ ದಿಸೆಯಲ್ಲಿ​ ಮಾರ್ಗದರ್ಶನ ನೀಡುವುದು ಅತ್ಯಗತ್ಯವಾಗಿದೆ​ ಎಂದು ಹೇಳಿದರು.
ಸಮಾರಂಭದಲ್ಲಿ ​ಮಠಾಧೀಶರು, ದೇವಸ್ಥಾನ​ ಕಮೀಟಿಯವರು, ಗ್ರಾಮದ ​ ಹಿರಿಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button