Kannada NewsKarnataka NewsLatest

ಪಂಚಕಲ್ಯಾಣ ಪೂಜೆಗೆ ಜೊಲ್ಲೆ ದಂಪತಿ ಚಾಲನೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ- ಭೋಜ ಗ್ರಾಮದ ಶಾಂತಿಸಾಗರಂ ತೀರ್ಥ ಜೈನ ಕೇಂದ್ರಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ  ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ, ತಪೋಭೂಮಿ ಪ್ರಣೇತಾ ಶ್ರೀ 108 ಪ್ರಜ್ಞಾಸಾಗರ ಜಿ, ಮುನಿ ಮಹಾರಾಜರ ಆಶೀರ್ವಾದ ಪಡೆದರು. ಬಳಿಕ ಪಂಚಕಲ್ಯಾಣ ಪೂಜೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ  ಜೈನ ಧರ್ಮದ ಮೂಲ ಮಹಾಪುರುಷ, ದೇಶದ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾಜ್ಞಾನಿ, ಶ್ರೀ ಶಾಂತಿಸಾಗರ ಮಹಾರಾಜರು ಜನ್ಮವೆತ್ತಿದ ಪುಣ್ಯಭೂಮಿ ಹೆಮ್ಮೆಯ ನಿಪ್ಪಾಣಿ ಮತಕ್ಷೇತ್ರದ ಭೋಜ ಗ್ರಾಮ. ನಾಡಿನ ಒಳಿತಿಗಾಗಿ ಊರಿನ ಬಂಧುಗಳೆಲ್ಲಾ ಸೇರಿ ಈ ಪೂಜೆಯನ್ನು ಹಮ್ಮಿಕೊಂಡಿದ್ದೇವೆ. ಸುಮಾರು 8 ದಿನಗಳ ಕಾಲ ಇಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಇಂದು ಸರ್ವಾಂಗಿ ಯಕ್ಷ ದೇವತಾ ಪೂಜೆ, 24 ತೀರ್ಥಂಕರ ಪೂಜೆ ಹಾಗೂ ಆದರ್ಶ ಪಂಚಕಲ್ಯಾಣ ಪೂಜೆ ನೆರವೇರಿಸಿ, ನಾಡಿನೆಲ್ಲೆಡೆ ಸಮೃದ್ಧಿ ಪ್ರಜ್ವಲಿಸಿ,  ಪ್ರಜೆಗಳಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಭರತ ಕುಪ್ಪನಟ್ಟಿ, ಪ್ರಶಾಂತ ಪಾಟೀಲ,  ತಾತ್ಯಾಸಾಬ ಪಾಟೀಲ್, ಅದಗೌಡ ಪಾಟೀಲ, ವಿನಾಯಕ ಲಕ್ಷ್ಮಣ ಪಾಟೀಲ,  ಅಪ್ಪಾಸಾಬ ಪಾಟೀಲ, ಶ್ರಾವಕ, ಶ್ರಾವಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button