
ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಚಿವೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಶನಿವಾರ ನವದೆಹಲಿಯಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿದರು.
ಇದೇ ವೇಳೆ ಖೇಲೋ ಇಂಡಿಯಾ ಯೋಜನೆಯಡಿ ನಿಪ್ಪಾಣಿ ಮತಕ್ಷೇತ್ರಕ್ಕೆ ಈಜುಕೊಳ ಮಂಜೂರು ಮಾಡಿಕೊಟ್ಟಿದ್ದಕ್ಕೆ ಸಚಿವರಿಗೆ ಶಶಿಕಲಾ ಜೊಲ್ಲೆ ಧನ್ಯವಾದ ಸಲ್ಲಿಸಿದರು.