ಅಮೂಲಾಗ್ರ ಬದಲಾವಣೆಯಿಂದ ಅಭಿವೃದ್ಧಿಯ ಹೊಸದಿಕ್ಕು ತೋರಿಸಿದ ಜೊಲ್ಲೆ ದಂಪತಿ: ಕನೇರಿ ಶ್ರೀ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: “ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ದಂಪತಿ ನಗರ ಸೇರಿದಂತೆ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿಯೂ ಅಮೂಲಾಗ್ರ ಬದಲಾವಣೆ ಮೂಲಕ ಅಭಿವೃದ್ಧಿಯ ಹೊಸ ದಿಕ್ಕನ್ನು ನೀಡಿದ್ದಾರೆ. ಇತಿಹಾಸ ಅರಿಯಲು ಹಾಗೂ ಅದರಿಂದ ಸ್ಫೂರ್ತಿ ಪಡೆಯಲು ಶಿವಪುತ್ರ ಸಂಭಾಜಿಯಂಥ ಮಹಾನ್ ನಾಟಕಗಳನ್ನು ಹಮ್ಮಿಕೊಂಡಿದ್ದಾರೆ” ಎಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನೇರಿಯ ಸಿದ್ಧಗಿರಿಮಠದ ಅದೃಶ್ಯಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಶ್ರೀಪೇವಾಡಿ ರಸ್ತೆಯಲ್ಲಿರುವ ಜೊಲ್ಲೆ ಶಿಕ್ಷಣ ಸಂಕೀರ್ಣದಲ್ಲಿ ಜೊಲ್ಲೆ ಗ್ರುಪ್ ಆಯೋಜಿಸಿದ ಶಿವಪುತ್ರ ಸಂಭಾಜಿ ನಾಟಕದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. “ಸಮಾಜದಲ್ಲಿ ಛತ್ರಪತಿಯವರ ಚಿಂತನೆಗಳನ್ನು ಮೂಡಿಸುವುದು ಅವಶ್ಯವಾಗಿದೆ. ಸದ್ಯ ಓದುವ ಸಂಸ್ಕೃತಿ ಹಿಂದುಳಿದಿದ್ದು, ಎಲ್ಲರೂ ಮೊಬೈಲ್‌ಗೆ ಅಂಟಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇತಿಹಾಸ ಅರಿಯುವ ಒಂದು ಅವಕಾಶವನ್ನು ಮಹಾನಾಟಕದ ಮೂಲಕ ಕಲ್ಪಿಸಿಕೊಟ್ಟಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮತಕ್ಕಾಗಿ ನಾನಾ ಪ್ರಕಾರಗಳು ನಡೆಯುತ್ತಿರುವಾಗ ಸಮಾಜ ಸುಸಂಸ್ಕೃತವಾಗಲಿ ಮತ್ತು ಸಮೃದ್ಧವಾಗಲೆಂದು ಜೊಲ್ಲೆ ದಂಪತಿ ಶ್ರಮ ಶ್ಲಾಘನೀಯ” ಎಂದರು.
ಸ್ಟಾರ್ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷ ಸಂಜಯ ಘೋಡಾವತ್ ಮಾತನಾಡಿ ‘ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಮಾಡಿರುವ ಕಾರ್ಯ ಇಡಿ ಸಮಾಜಕ್ಕೆ ಮಾದರಿಯಾಗಿದೆ’ ಎಂದರು. ಶಾಹು ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಮರಜೀತ ಘಾಟಗೆ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. ಎರಡನೇ ದಿನದ ಮಹಾನಾಟ್ಯಕ್ಕೂ ಸ್ಥಳೀಯರು ಹಾಗೂ ಗ್ರಾಮೀಣ ಭಾಗದ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು.
ಈ ಸಂದರ್ಭದಲ್ಲಿ ನಿಡಸೋಸಿಯ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿಂಚಣಿಯ ಸಿದ್ಶಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮೀಜಿ, ಸದಲಗಾದ ಶ್ರದ್ಧಾನಂದ ಸ್ವಾಮೀಜಿ, ಸ್ಥಳೀಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ನಿವೇದಿತಾ ಘಾಟಗೆ, ಬ್ರಿಗೇಡಿಯರ್ ಸಿ. ದಯಾನಂದ, ಪವನ ಪಾಟೀಲ, ಬಂಕೊಳ್ಳಿ, ಮೊದಲಾದವರು ಉಪಸ್ಥಿತರಿದ್ದರು. ಜೊಲ್ಲೆ ಗ್ರುಪ್‌ನ ಉಪಾಧ್ಯಕ್ಷ ಬಸವ ಪ್ರಸಾದ ಜೊಲ್ಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದ ಸಿಎಂ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ