Belagavi NewsBelgaum NewsKannada NewsKarnataka NewsLatestSports

*ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿರುವ ಎಂ.ಪಿ. ಟ್ರೋಫಿ ಕಬಡ್ಡಿ ಗ್ರ್ಯಾಂಡ್ ಫಿನಾಲೆಗೆ ಡೇಟ್ ಫಿಕ್ಸ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಎಂ.ಪಿ. ಟ್ರೋಫಿ ಕಬಡ್ಡಿ ಗ್ರ್ಯಾಂಡ್ ಫೈನಲ್ ಪಂದ್ಯಾವಳಿಗಳನ್ನು ಜನೇವರಿ 11 ಮತ್ತು 12 ರಂದು ಚಿಕ್ಕೋಡಿಯ ಕಿವಡ ಮೈದಾನದಲ್ಲಿ ಆಯೋಜಿಸಲಾಗಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಥಣಿ,ಕುಡಚಿ,ರಾಯಬಾಗ,ಕಾಗವಾಡ,ಹುಕ್ಕೇರಿ ನಿಪ್ಪಾಣಿ, ಚಿಕ್ಕೋಡಿ,ಯಮಕನಮರಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಸ್ಪರ್ಧೆಯಲ್ಲಿ ಪುರುಷ 32 ಹಾಗೂ ಮಹಿಳೆಯರ 32 ಒಟ್ಟು 64 ತಂಡಗಳು ಗ್ರಾಂಡ್ ಫೈನಲ್ ಗೆ ಅರ್ಹತೆ ಪಡೆದಿವೆ. ಮಹಿಳಾ ಮತ್ತು ಪುರುಷರ ತಂಡಗಳ ಗ್ರ್ಯಾಂಡ್ ಫೈನಲ ವಿಜೇತರಾದವರಿಗೆ ಪ್ರಥಮ ಬಹುಮಾನ 51,000/- ದ್ವಿತೀಯ ಬಹುಮಾನ 31,000/- ತೃತೀಯ ಬಹುಮಾನ 15,000/- ಹಾಗೂ ಚತುರ್ಥ ಬಹುಮಾನ 15,000/- ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು.

ವಿಶೇಷ ಸೂಚನೆ. ಇಂದು ಜನವರಿ 9 ರಂದು ಬೆಳಿಗ್ಗೆ 11 ಗಂಟೆಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದ ವಿಜೇತರಾದ ಎಲ್ಲಾ ತಂಡಗಳ ಲಾಟ್ಸ್ ಚೀಟಿ ಎತ್ತಿರುವುದರ ಮೂಲಕ ಚಿಕ್ಕೋಡಿಯ ಸಂಸದರ ಕಚೇರಿಯಲ್ಲಿ ಡ್ರಾ ಮಾಡಲಾಗುವುದು.ಕಾರಣ ವಿಜೇತರಾದ ಎಲ್ಲ ತಂಡಗಳ ನಾಯಕರು ಅಥವಾ ವ್ಯವಸ್ಥಾಪಕರು ಹಾಜರಿರಬೇಕು ಎಂದು ಜೊಲ್ಲೆ ಗ್ರೂಪ್ ನ ಉಪಾಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button