ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜಕೀಯದಲ್ಲಿ ಹಾಸು ಹೊಕ್ಕಾಗಿರುವ ಜಾತೀಯತೆ ಮತ್ತು ಭ್ರಷ್ಟಾಚಾರ ಇಂದು ಪತ್ರಿಕಾರಂಗಕ್ಕೂ ವಕ್ಕರಿಸಿದೆ ಎಂದು ಹಿರಿಯ ಪತ್ರಕರ್ತ ಎಚ್.ಆರ್.ಶ್ರೀಶ ವಿಷಾದಿಸಿದರು.
ಜಿಲ್ಲಾ ಪತ್ರಕರ್ತರ ಸಂಘವು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ್ ಅವರ ಸುಧರ್ಮಾ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜಾತೀಯತೆ ಮತ್ತು ಭ್ರಷ್ಟಾಚಾರ ಎರಡೂ ಪತ್ರಿಕೋದ್ಯಮಕ್ಕೆ ಶತ್ರುಗಳು. ಪತ್ರಿಕಾರಂಗ ಇರುವುದು ಹಣ ಮಾಡಲು ಅಲ್ಲ, ಸಮಾಜ ಸೇವೆಗೆ ಎಂಬುದನ್ನು ಮರೆಯಬಾರದು. ಯಾರಿಗೆ ಹಣ, ಅಧಿಕಾರ ಮತ್ತು ಬಂಗಲೆ ಮಾಡಿಕೊಳ್ಳುವ ವ್ಯಾಮೋಹ ಇದೆಯೋ ಅವರೆಲ್ಲರೂ ಬೇರೆ ಬೇರೆ ಮಾರ್ಗ ನೋಡಿಕೊಳ್ಳುವುದು ಸೂಕ್ತ. ಪತ್ರಿಕೋದ್ಯೋಮದ ಹುಚ್ಚು ಇರುವವರು ಮಾತ್ರ ಮಾಧ್ಯಮ ಕ್ಷೇತ್ರ ಪ್ರವೇಶಿಸಲಿ ಎಂದು ಅವರು ಹೇಳಿದರು.
ಯಾರಿಗೆ ಓದು ಮತ್ತು ಬರೆಯುವ ಹುಚ್ಚು ಇದೆಯೋ, ಸಮಾಜದ ಎಲ್ಲಾ ಸ್ತರಗಳ ಬಗ್ಗೆ ಅರಿವು ಯಾರಿಗಿದೆಯೋ ಅವರು ಮಾತ್ರ ಪತ್ರಿಕೋದ್ಯಮಕ್ಕೆ ಬಂದರೆ ಒಳ್ಳೆಯದು. ಸುಧರ್ಮಾ ಕೇವಲ ಪತ್ರಿಕೆಯಲ್ಲ, ಅದು ಸಂಸ್ಕೃತಿಯ ಪ್ರತೀಕ. ಪತ್ರಿಕೆಯು ಉತ್ತಮ ಹೆಸರು ಪಡೆದುಕೊಂಡಿದೆ. ಇಲ್ಲಿನ ರಾಜರು ಮತ್ತು ದಿವಾನರು ಮೈಸೂರು ಸಂಸ್ಥಾನದ ಅಭಿವೃದ್ಧಿಗಾಗಿ ಸಾಕಷ್ಟುಶ್ರಮ ವಹಿಸಿದ್ದಾರೆ. ಪತ್ರಕರ್ತರಿಗೆ ತಾವು ಕೆಲಸ ಮಾಡುವ ಸ್ಥಳದ ಬಗ್ಗೆ ಕನಿಷ್ಠ ಇತಿಹಾಸ ತಿಳಿದುಕೊಳ್ಳಬೇಕು. ಆಗ ಮಾತ್ರ ನೀವು ಅಲ್ಲಿನ ಸಮಸ್ಯೆಗೆ ಸ್ಪಂದಿಸಲು ಸಾಧ್ಯ. ಇಂದಿನ ಯುವ ಪೀಳಿಗೆ ಇತಿಹಾಸ ತಿಳಿದುಕೊಳ್ಳುವ ವ್ಯವದಾನವೇ ಇಲ್ಲ ಎಂದು ಅವರು ಹೇಳಿದರು.
ಕರ್ನಾಟಕ ಮಾಧ್ಯಮ ಆಕಾಡೆಮಿ ಸದಸ್ಯ ಕಂ.ಕ. ಮೂರ್ತಿ ಮಾತನಾಡಿ, ಇಂದಿನ ಡಿಜಿಟಲ್ ದಿಗಳಲ್ಲಿಯೂ ಪತ್ರಿಕೆಗಳು ತಮ್ಮ ಸತ್ವ ಮತ್ತು ಅಸ್ತಿತ್ವವನ್ನು ಕಾಪಾಡಿಕೊಂಡಿವೆ. ಡಿಜಿಟಲ್ ಯುಗದೊಂದಿಗೆ ಹೆಜ್ಜೆ ಹಾಕುತ್ತಿವೆ. ಈ ಸಾಲಿನಲ್ಲಿ ಸುಧರ್ಮಾ ಪತ್ರಿಕೆ ನಿಲ್ಲುತ್ತದೆ. ಇಂತಹ ಪುಸ್ತಕಗಳ ಪೈಕಿ ಸುಧರ್ಮಾ ಪುಸ್ತಕವು ಒಂದಾಗಿದೆ. ಒಬ್ಬ ಪತ್ರಕರ್ತ ಕೇವಲ ತನ್ನನು ಸುದ್ದಿ ಬರೆಯುವುದಕ್ಕೆ ಸೀಮಿತಗೊಸಬಾರದು. ಸೂಕ್ಷ್ಮ ವಿಚಾರದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಪತ್ರಿಕೋದ್ಯಮ ವೃತ್ತಿಯಲ್ಲ ಅದೊಂದು ವಿಶಿಷ್ಟಸೇವೆ. ಪತ್ರಕರ್ತರು ಮಾತ್ರ ಸಮಾಜದ ಎಲ್ಲಾ ರೀತಿಯ ಸಾಮಾಜಿಕ ವೈರುದ್ಯಗಳ ಜೊತೆ ಸಂಘರ್ಷ ಮಾಡಬಲ್ಲರು. ಯಾವುದೇ ಸಿದ್ಧಾಂತಕ್ಕೂ ನೈಜ ವಿಷಯ ಬಿತ್ತರಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್ ಮಾತನಾಡಿದರು.
ಸುಧರ್ಮಾ ಪತ್ರಿಕೆಯ ಸಂಪಾದಕಿ ಕೆ.ಎಸ್. ಜಯಲಕ್ಷ್ಮಿ, ಡಾ.ಟಿ.ವಿ. ಸತ್ಯನಾರಾಯಣ, ಕೂಡ್ಲಿ ಗುರುರಾಜ. ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಇದ್ದರು.
ಸತೀಶ್ ಜಾರಕಿಹೊಳಿ ವಿರುದ್ಧ ಸ್ವಾಭಿಮಾನಿ ಹಿಂದೂ ಅಭಿಯಾನ; ಸಚಿವ ಸುನೀಲ್ ಕುಮಾರ್ ಕರೆ
https://pragati.taskdun.com/politics/swabhimani-hindhu-abhiyanasunil-kumarsatisha-jarakiholistatment/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ