*ಧೀಮಂತ ನಾಯಕ, ಸಹಕಾರಿ ಭೀಷ್ಮ ಕೆ ಎಚ್ ಪಾಟೀಲ ಅವರ ಜನ್ಮ ಶತಮಾನೋತ್ಸವ ಆಚರಣೆ*
ಪ್ರಗತಿವಾಹಿನಿ ಸುದ್ದಿ: ಹುಲಕೋಟಿ ಹುಲಿ, ಸಹಕಾರಿ ರಂಗದ ಧುರೀಣ ಶ್ರೀ ಕೆ ಎಚ್ ಪಾಟೀಲ ಅವರ 100ನೇ ಜನ್ಮ ಶತಾಬ್ದಿ ಯನ್ನು ಬೆಳಗಾವಿಯಲ್ಲಿ ಅವರ ಅಭಿಮಾನಿಗಳು ದಿನಾಂಕ 16 ರಂದು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಬೆಳಿಗ್ಗೆ ಚನ್ನಮ್ಮ ವೃತ್ತದಲ್ಲಿರುವ ಶ್ರೀ ಗಣೇಶ ಮಂದಿರದಲ್ಲಿ ಅವರ ಹೆಸರಿನಲ್ಲಿ ಅಭಿಷೇಕ ಪೂಜೆಯನ್ನು ನೆರವೇರಿಸಲಾಯಿತು.
ನಗರದ ರಡ್ಡಿ ಬ್ಯಾಂಕಿನ ಸಭಾಂಗಣದಲ್ಲಿ ಭಾವಚಿತ್ರ ಪೂಜೆ ಮತ್ತು ಉಪನ್ಯಾಸ ಕಾಯ೯ಕ್ರಮ ಏರ್ಪಡಿಸಲಾಗಿತ್ತು.ಹುಕ್ಕೇರಿಯ ಹಿರಿಯ ನ್ಯಾಯವಾದಿ ಶ್ರೀ ಎಸ್ ಆರ್ ಕರೋಶಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಅವರು ಮಾತನಾಡುತ್ತ ಸಧ್ಯದ ವಾತಾವರಣದಲ್ಲಿ ನಾಡಿಗೆ ಕೆ ಎಚ್ ಪಾಟೀಲರಂತಹ ನಾಯಕರ ಅವಶ್ಯಕತೆ ಇದೆ ಎಂದರು.ಅವರು ಹಾಕಿರುವ ಹಾದಿಯಲ್ಲಿ ನಾವೆಲ್ಲ ಪ್ರಾಮಾಣಿಕವಾಗಿ ನಡೆಯುವದೇ ಅವರಿಗೆ ಸಲ್ಲಿಸುವ ಗೌರವ ಎಂದರು.
ಆ ನಂತರ ಜಾಂಬೋಟಿ ರಸ್ತೆಯಲ್ಲಿರುವ ಶಾಂತಾಯಿ ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಎಲ್ಲರಿಗೂ ಹಣ್ಣು ಹಂಪಲ ಹಾಗೂ ಸಿಹಿ ಸಹಿತ ಭೋಜನ ವಿತರಿಸಲಾಯಿತು.
ಈ ಎಲ್ಲ ಕಾಯ೯ಕ್ರಮಗಳಲ್ಲಿ ಬೆಳಗಾವಿಯ ಮಾಜಿ ಮೇಯರ ವಿಜಯ ಮೋರೆ,ರಡ್ಡಿ ಬ್ಯಾಂಕಿನ ಉಪಾಧ್ಯಕ್ಷ ಕೆ ಬಿ ನಾಯಕ, ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಇನ್ಸ್ಟೂಟ ಆಫ್ ಇಂಜನಿಯರ್ಸ ಬೆಳಗಾವಿಯ ಮಾಜಿ ಅಧ್ಯಕ್ಷ ರಮೇಶ ಜಂಗಲ, ಡಾ.ಗಿರೀಶ ಸೋನವಾಲಕರ, ಬಿ ಎನ್ ನಾಡಗೌಡರ, ಪಿ ಎಲ್ ಮೋರೆ,ಪ್ರಕಾಶ ಕಾತರಕಿ, ಟಿ ಟಿ ಲಂಕೆಪ್ಪನವರ, ಆರ್ ಎಸ್ ಪಾಟೀಲ, ಶಂಕರ ಅರಕೇರಿ,ಪಿ ವಿ ಮಾಸ್ತಿ,ನಾರಾಯಣ ಕೆಂಚರಡ್ಡಿ, ಸುಭಾಷ ಹುಚರಡ್ಡಿ ಹಾಗೂ ಶ್ರೀಮತಿ ದಾಸರಡ್ಡಿ ಮುಂ.ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ