Kannada NewsKarnataka NewsLatest

ತುರ್ತು ಪತ್ರಿಕಾಗೋಷ್ಠಿ ಕರೆದ ಕೆ.ಕಲ್ಯಾಣ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೌಟುಂಬಿಕ ವಿವಾದದಲ್ಲಿ ಸಿಲುಕಿರುವ ಖ್ಯಾತ ಗೀತ ಸಾಹಿತಿ ಕೆ.ಕಲ್ಯಾಣ ಭಾನುವಾರ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ತಮ್ಮ ಪತ್ನಿಯನ್ನು ಬಾಗಲಕೋಟೆ ಮೂಲಕ ಮಂತ್ರವಾದಿಯೊಬ್ಬ ಅಪಹರಣ ಮಾಡಿದ್ದಾನೆ ಎಂದು ಕಲ್ಯಾಣ್ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಲ್ಯಾಣ್ ಪತ್ನಿ ಬೆಳಗಾವಿ ಮಾಳಮಾರುತಿ ಬಡಾವಣೆಯ ಅಪಾರ್ಟ್ ಮೆಂಟ್ ನಲ್ಲಿ ಪಾಲಕರೊಂದಿಗಿರುವುದನ್ನು ಪತ್ತೆ ಮಾಡಿದ ಪೊಲೀಸರು ಆಕೆಯನ್ನು ಕರೆದು ವಿಚಾರಿಸಿದ್ದಾರೆ.

ಆಕೆ ತನ್ನನ್ನು ಯಾರೂ ಅಪಹರಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜೊತೆಗೆ ಕಲ್ಯಾಣ್ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ ಎಂದು ಗೊತ್ತಾಗಿದೆ.  ವಿಚಾರಣೆ ಭಾನುವಾರವೂ ಮುಂದುವರಿಯುವ ಸಾಧ್ಯತೆ ಇದೆ.

Home add -Advt

ವಿವಾದ ದೊಡ್ಡ ಸುದ್ದಿಯಾಗುತ್ತಿದ್ದಂತೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಕಲ್ಯಾಣ, ಪತ್ನಿ ಮಾಡಿರುವ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಲಿ. ಸಧ್ಯ ವಿಷಯ ನ್ಯಾಯಾಲಯದಲ್ಲಿರುವುದರಿಂದ ಉಹಾಪೋಹಗಳಿಗೆ ಅವಕಾಶ ಬೇಡ ಎಂದಿದ್ದಾರೆ.

ಭಾನುವಾರ ಬೆಳಗ್ಗೆ 10.30ಕ್ಕೆ ಕಲ್ಯಾಣ ಬೆಳಗಾವಿಯ ಖಾಸಗಿ ಹೊಟೆಲ್ ಒಂದರಲ್ಲಿ ಕಲ್ಯಾಣ್ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದಾರೆ.

ನನ್ನ ಹೆಂಡತಿ ಕಿಡ್ನ್ಯಾಪ್ ಆಗಿದ್ದಾಳೆ ಎಂದ ಪ್ರೇಮಕವಿ; ಉಲ್ಟಾ ಹೊಡೆದ ಪತ್ನಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button