ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಿಕ್ಕೋಡಿಯ ಕೆ.ಎಲ್.ಇ ಇಂಜಿನೀಯರಿಂಗ್ ಕಾಲೇಜಿನ ಕಂಪ್ಯೂಟರ ಸಾಯನ್ಸ್ ವಿಭಾಗದ ವತಿಯಿಂದ ಸೈಬರ್ ಸೆಕ್ಯೂರಿಟಿ ಟೂಲ್ಸ್ ಫಾರ್ ಯುಥ್ ಆನಲೈನ್ ವೆಬಿನಾರನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾದ ರಾಷ್ಟ್ರಪತಿ ಪೋಲಿಸ್ ಪದಕ ವಿಜೇತ ಡಾ. ವರುಣ ಕಪೂರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಮೋಬೈಲ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜೀಕ ಜಾಲತಾನಗಳಲ್ಲಿ ಹಾಗೆಯೇ ಯುವಪಿಳಿಗೆ 50% ಗಿಂತ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ನಾವಾಗಿಯೇ ನಮ್ಮ ಮಾಹಿತಿಯನ್ನು ಸೈಬರ್ ಕಳ್ಳರಿಗೆ ನೀಡುತ್ತೆವೆ. ಇದರಿಂದಾಗಿ ನಮಗೆ ಗೊತ್ತಿಲ್ಲದ ಹಾಗೇ ಸೈಬರ್ ವಂಚನೆಗಳ ಮುಖಾಂತರ ನಮ್ಮನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಆದಕಾರಣ ನೈಜ ಪ್ರಪಂಚದ ಮನಸ್ಥಿತಿ ಇಟ್ಟುಕೊಂಡು ತಮ್ಮ ವೈಯಕ್ತಿಕ ಮಾಹಿತಿಯನ್ನು ಸಾಮಾಜೀಕ ಜಾಲತಾಣಗಳಲ್ಲಿ ಹಾಕಬಾರದು ಎಂದರು.
ಆನ್ ಲೈನಲ್ಲಾಗುವ ವಂಚನೆಗಳಿಗೆ ನೂರು ಪ್ರತಿಶತ ಸುರಕ್ಷೆ ನೀಡಲು ಸಾಧ್ಯವಿಲ್ಲ. ಸೈಬರ್ ವಂಚನೆಯು ನಿಮ್ಮ ಮತ್ತು ನಿಮ್ಮ ಸಾಧನದ ನಡುವಿನದಾಗಿದೆ. ಸುರಕ್ಷತೆ ಆಯ್ಕೆಯಾಗಬಾರದು, ಅದು ನಿಮ್ಮ ಹವ್ಯಾಸವಾಗಬೇಕು. ಅರಿವು ಮುಖ್ಯ. ವ್ಯಕ್ತಿಗತ ಮಾಹಿತಿಯ ರಕ್ಷಣೆಯೇ ಸೈಬರ್ ಭದ್ರತೆಯ ಮುಲವಾಗಿದೆ. ಸಾಮಾಜೀಕ ಜಾಲತಾನದಲ್ಲಿ ತಾವು ಗೊತ್ತಿಲ್ಲದೇ ತಪ್ಪು ಮಾಡಿದರೂ ಅದು ತಪ್ಪೆ. ಅತ್ಯಂತ ಜವಾಬ್ದಾರಿಯುತವಾಗಿ ಸಾಮಾಜೀಕ ಜಾಲತಾಣದ ಬಳಕೆ ಮಾಡಬೇಕು. ಆನ್ ಲೈನ್ ಗೆಮಿಂಗ್ ಮಕ್ಕಳನ್ನು ಮಾನಸಿಕವಾಗಿ ಅನಾರೊಗ್ಯಗೊಳಿಸುತ್ತದೆ. ತಮ್ಮ ಮಕ್ಕಳು ಮೋಬೈಲ್ ನಲ್ಲಿ ಎನು ಮಾಡುತ್ತಾರೆಂಬುದರ ಕಲ್ಪನೆ ಪಾಲಕರಿಗಿರಬೇಕು ಹಾಗೆಯೇ ಬಳಕೆಗೆ ಸಮಯ ಮೀತಿ ಇರಬೇಕು. ಸೈಬರ್ ಬೆದರಿಕೆಗಳಿಗೆ ಪ್ರತಿಕ್ರಿಯಿಸದೇ ಇರುವುದೇ ಉತ್ತಮ. ಆನ್ ಲೈನಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಹೊಂದದಿರಿ. ನೈಜ ಜೀವನದಲ್ಲಿ ನಿಮ್ಮ ದೌರ್ಬಲ್ಯ ಗಮನಿಸಿ ಅಪಾಯಕ್ಕೆ ಸಿಲುಕಿಸುತ್ತಾರೆ. ಆದರೆ ಆನ್ ಲೈನಲ್ಲಿ ನಿಮ್ಮ ವಿಶೇಷತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಆನ್ ಲೈನಲ್ಲಿ ಯಾರನ್ನು ಕಣ್ಣುಮುಚ್ಚಿ ನಂಬಬಾರದು, ಸಂಪೂರ್ಣ ಜ್ಞಾನ ಪಡೆದುಕೊಳ್ಳಿ, ವಿವೇಕಯುತವಾಗಿ ವರ್ತಿಸಿ, ಸುರಕ್ಷತೆ ಮನಸ್ಥಿತಿ ಹೊಂದಿರಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯರಾದ ಡಾ. ಪ್ರಸಾದ ರಾಂಪೂರೆ ಈ ವೆಬಿನಾರನಲ್ಲಿ ಪಡೆದುಕೊಂಡಿರುವ ಜ್ಞಾನವನ್ನು ಅಳವಡಿಸಿಕೊಂಡರೇ ಮಾತ್ರ ಸಾಮಾಜೀಕ ಜಾಲತಾನಗಳ ವಂಚನೆಗಳನ್ನು ತಡೆಗಟ್ಟಬಹುದೆಂದು ಹೇಳಿದರು. ಈ ವೆಬಿನಾರನಲ್ಲಿ ಭಾರತ, ಪಾಕಿಸ್ತಾನ, ಫಿಲಿಪೈನ್ಸ್, ಇಂಡೊನೆಶಿಯಾ, ಅಲ್ಜಿರಿಯಾ ಸೇರಿದಂತೆ ಬೇರೆ-ಬೇರೆ ದೇಶಗಳ 500 ಕ್ಕೂ ಹೆಚ್ಚು ಜನರು ಭಾಗವಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ