ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ರಮೇಶ್ ಮತ್ತು ನನಗೆ ಸಚಿವ ಸ್ಥಾನ ಸಿಗುವುದು ಖಾತ್ರಿಯಾಗಿದೆ,” ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರಮೇಶ ಜಾರಕಿಹೊಳಿ ಜತೆಗೂಡಿ ಬುಧವಾರ ರಾತ್ರಿ ಭೇಟಿ ಮಾಡಿದ ನಂತರ ಅವರು ಮಾಧ್ಯಮಗಳೆದುರು ಹೇಳಿಕೊಂಡಿದ್ದಾರೆ.
“ಇನ್ನೂ ಎರಡು, ಮೂರು ಜನರಿಗೆ ಸಚಿವ ಸ್ಥಾನ ನೀಡಲು ಪ್ರಯತ್ನಗಳು ನಡೆದಿದ್ದು ಆರರಲ್ಲಿ ಎಷ್ಟು ಜನರಿಗೆ ನೀಡಲು ಸಾಧ್ಯವೋ ಗೊತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ. ನಮ್ಮಿಬ್ಬರಿಗೂ ಕ್ಲೀನ್ ಚಿಟ್ ಸಿಕ್ಕಿದೆ. ಹೀಗಾಗಿ ನಮ್ಮಿಬ್ಬರದೂ ಖಾತ್ರಿ, ಗುರುವಾರದಿಂದ ನಾವಿಬ್ಬರೂ ಸದನದ ಕಲಾಪಕ್ಕೆ ಹಾಜರಾಗಲಿದ್ದೇವೆ” ಎಂದು ಈಶ್ವರಪ್ಪ ತಿಳಿಸಿದರು.
ಇದೇ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ, “ಬಿಜೆಪಿ ಸರಕಾರ ರಚನೆಗಾಗಿ ಕಾಂಗ್ರೆಸ್ ನಲ್ಲಿ ಮಂತ್ರಿ ಸ್ಥಾನ ಬಿಟ್ಟು ಬಂದಿದ್ದೇನೆ. ಮಂತ್ರಿ ಸ್ಥಾನಕ್ಕಾಗಿ ಬಿಜೆಪಿಗೆ ಬಂದಿಲ್ಲ, 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವುದು ನನ್ನ ಗುರಿ.. ” ಎಂದಷ್ಟೇ ಹೇಳಿ ಅಲ್ಲಿಂದ ನಿರ್ಗಮಿಸಿದರು.
ಹೀಗಾಗಿ ರಾಜ್ಯದಲ್ಲಿ ಸಚಿವ ಸ್ಥಾನದ ಅಸಮಾಧಾನದ ಅಗ್ನಿ ಸಿಎಂ ಭೇಟಿಯೊಂದಿಗೆ ತಾತ್ಕಾಲಿಕ ಶಮನ ಕಂಡಂತಾಗಿದೆ. ಹಾಗಾಗಿ ಗುರುವಾರದಿಂದ ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ಸದನಕ್ಕೆ ಹಾಜರಾಗಲಿದ್ದಾರೆ. ಆದರೆ ಸಚಿವ ಸಂಪುಟ ವಿಸ್ತರಣೆ ಮತ್ತು ಇವರಿಬ್ಬರು ಸಂಪುಟ ಸೇರುವುದು ಮುಂದಿನವಾರ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿಬಂದ ನಂತರವಷ್ಟೆ ಸ್ಪಷ್ಟವಾಗಲಿದೆ.
ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ: ನಾಳೆ ಸಿಎಂ ಸಭೆ
https://pragati.taskdun.com/corona-worry-again-in-the-state-cm-meeting-tomorrow/
ಸರಕಾರ ನಾಳೆ ಆಟ ಆಡಿದರೆ ನನ್ನ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ -ಯತ್ನಾಳ
https://pragati.taskdun.com/if-the-government-plays-games-tomorrow-i-will-announce-my-next-political-decision-yatna/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ