Kannada NewsKarnataka NewsPolitics

*ನಿಮ್ಮಣ್ಣಂಗೆ ಹೇಳು ಈಶ್ವರಪ್ಪ ಗೆಲ್ಲಲಿ ಬಿಡು ಎಂದು; ವಿಜಯೇಂದ್ರಗೆ KSE ಟಾಂಗ್*

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರರ ವಿರುದ್ಧ ಕಿಡಿಕಾರಿದ್ದಾರೆ.

Home add -Advt

ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಯಾವ ಕಾರಣಕ್ಕೂ ಬಿಜೆಪಿ ಅಥವಾ ಕಮಲದ ಚಿಹ್ನೆಗೆ ಮತ ಹಾಕಬೇಡಿ. ಬಿಜೆಪಿ ಎಲ್ಲರಿಗೂ ಮೋಸ ಮಾಡಿದೆ. ಯಡಿಯೂರಪ್ಪ ಹಾಗೂ ಮಕ್ಕಳದ್ದೇ ಬಿಜೆಪಿಯಲ್ಲಿ ದರ್ಬಾರ್ ಆಗಿದೆ. ಏಪ್ರಿಲ್ 19ರಂದು ನನ್ನ ಚಿಹ್ನೆ ಗೊತ್ತಾಗಲಿದೆ. ಅಂದಿನಿಂದ ರಾವಣ ಸಂಹಾರಕ್ಕೆ ಹೆಜ್ಜೆ ಇಡುತ್ತೇನೆ ಎಂದು ಗುಡುಗಿದ್ದಾರೆ.

ಇಂದು ಈಶ್ವರಪ್ಪ ಸ್ಪರ್ಧೆ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಬಿ.ವೈ.ವಿಜಯೇಂದ್ರ ಇಂದು ಏನೇ ನೋವಿದ್ದರೂ ಮರೆತು ಬಿ.ವೈ.ರಾಘವೇಂದ್ರಗೆ ಬೆಂಬಲ ನೀಡಿ. ಪಕ್ಷದ ಹಿತದೃಷ್ಟಿಯಿಂದ ಸಹಮತ ನೀಡಿ ಎಂದಿದ್ದಾರೆ. ಆದರೆ ನಾನು ಹೇಳುತ್ತಿದ್ದೇನೆ. ಯಾಕೆ ನಿಮ್ಮಣ್ಣ ಸೋಲುತ್ತಾನೆ ಎಂಬ ಭೀತಿಯೇ? ನಿಮ್ಮಣ್ಣಂಗೆ ಹೇಳು ಈಶ್ವರಪ್ಪ ಗೆಲ್ಲಲಿ ಬಿಡು. ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹೇಳು ಎಂದು ಟಾಂಗ್ ನೀಡಿದ್ದಾರೆ.

ದೇವರಾಣೆಗೂ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಯಾವ ಕಾರಣಕ್ಕೂ ಹಿಂದೆ ಸರಿಯವ ಪ್ರಶ್ನೆ ಇಲ್ಲ. ಶಿವಮೊಗ್ಗದಿಂದ ಗೆದ್ದು ದೆಹಲಿಗೆ ಹೋಗಿ ಮೋದಿ ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

Related Articles

Back to top button