*ನಾವೇ ಕರ್ಕೊಂಡು ಬಂದಿದ್ರಿಂದ ಅನುಭವಿಸ್ತಿದೀವಿ; ವಲಸಿಗ ಬಿಜೆಪಿ ನಾಯಕರ ವಿರುದ್ಧ ಕೆ.ಎಸ್.ಈಶ್ವರಪ್ಪ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಆಪರೇಷನ್ ಕಮಲವೇ ಮುಳುವಾಗಿದೆ ಎಂದು ಹೇಳುವ ಮೂಲಕ ಬಿಜೆಪಿಗೆ ಬಂದಿದ್ದ ವಲಸಿಗರ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್ ನವರ ಗಾಳಿ ನಮ್ಮ ಮೇಲು ಬೀಸಿದೆ. ಹಾಗಾಗಿ ಪಕ್ಷದಲ್ಲಿ ಶಿಸ್ತು ಕಡಿಮೆಯಾಗಿದೆ. ಕಾಂಗ್ರೆಸ್ ನವರ ಆಗಮನದಿಂದಾಗಿ ಬಿಜೆಪಿಯಲ್ಲಿ ಇಂದು ಶಿಸ್ತು ಇಲ್ಲದಾಗಿದೆ. ನಾವು 4 ಜನ ಇದ್ದಾಗ ಪಕ್ಷದಲ್ಲಿ ಬಹಳ ಶಿಸ್ತು ಇತ್ತು. ಆದರೆ ಈಗ ಇಲ್ಲ, ನಾವೇ ಕರ್ಕೊಂಡು ಬಂದಿದ್ರಿಂದ ಅನುಭವಿಸುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
ಆಟ ಆಡ್ಲಿ ಅಂತ ಬಿಟ್ಟಿದ್ದಾರೆ, ಬಾಲ ಕಟ್ ಮಾಡ್ತಾರೆ. ನಮ್ಮ ಹೈಕಮಾಂಡ್ ನವರು ಯಾವತ್ತು ಬಾಲ ಕಟ್ ಮಾಡ್ತಾರೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಬಂದಿದ್ದ ವಲಸಿಗ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ