Karnataka News

ಕಾಗೇರಿ ಗಾಡ್ ಫಾದರ್ ಇಲ್ಲದೇ ಮೇಲೆ ಬಂದವರು: ಮುಖ್ಯಮಂತ್ರಿ ಬೊಮ್ಮಾಯಿ

ಪ್ರಗತಿ ವಾಹಿನಿ ಸುದ್ದಿ, ಶಿರಸಿ: ವಿಶ್ವೇಶ್ವರ ಹೆಗಡೆ ಕಾಗೇರಿ ಸಾಮಾಜಿಕ ಜೀವನಕ್ಕೆ ಬಂದಿದ್ದು ಕಾರ್ಯಕರ್ತನಾಗಿ. ಹಗಲಿರುಳೂ ಕೆಲಸ ಮಾಡಿ ಇಂದು ರಾಜ್ಯದಲ್ಲಿ ಮನೆಮಾತಾಗಿದ್ದಾರೆ ಎಂದು ಮುಖ್ಯಮಂತ್ರ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

ಶಿರಸಯಲ್ಲಿ ಹಮ್ಮಿಕೊಂಡಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಾರಂಭದಲ್ಲಿ ಕಾಗೇರಿಯವನ್ನು ಸನ್ಮಾನಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಮೇಲೆ ಬರಬೇಕಾದರೆ ಗಾಡ್ ಫಾದರ್ ಬೇಕು. ಆದರೆ ಕಾಗೇರಿ ಅವರಿಗೆ ಅವರಿಗೆ ಯಾವುದೇ ಗಾಡ್ ಫಾದರ್ ಇಲ್ಲ.

 

ಆದರೆ ನಿರಂತರ ಪರಿಶ್ರಮ, ಕಾಯಕದಿಂದ, ಸಾಮಥ್ರ್ಯದಿಂದ ಮುಂದೆ ಬಂದಿದ್ದಾರೆ. ಸಂಘಟನೆಯೇ ಅವರಿಗೆ ಗಾಡ್ ಫಾದರ್ ಎಂದು ಶ್ಲಾಘಿಸಿದರು.

ಎಲ್ಲಿಯೂ ಕೂಡ ರಾಜಿ ಮಾಡಿಕೊಳ್ಳದೆ ಬದುಕಿನ ಯಶಸ್ಸು, ಏಳು ಬೀಳುಗಳನ್ನು ಕಂಡುಕೊಂಡವರು. ಯಾವುದೇ ಆಸೆ ಆಕಾಂಕ್ಷೆಗೆ ಬಲಿಯಾದವರಲ್ಲ. ಕೆಲವು ವಿಷಯಗಳಲ್ಲಿ ಅವರದ್ದು ಗಟ್ಟಿ ನಿಲುವು.

 

ಆದರೆ ಸಾರ್ವಜನಿಕರಿಗೆ ಒಳ್ಳೆಯದಾಗುತ್ತದೆ ಎಂದರೆ ಎಲ್ಲ ಸಹಕಾರ ನೀಡುತ್ತಾರೆ. ಸ್ಥಿತ ಪ್ರಜ್ಞೆ ಇರುವ ವ್ಯಕ್ತಿ ಎಂದರು.

ಅಹಂಕಾರವಿಲ್ಲ
ಶಾಸಕರಾಗಿ 6 ಬಾರಿ ಆಯ್ಕೆಯಾಗಿದ್ದಾರೆ. 7ನೇ ಬಾರಿಯೂ ಆಯ್ಕೆಯಾಗುತ್ತಾರೆ. ಮಂತ್ರಿ ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಆದರೆ ಅವರ ವ್ಯವಸ್ಥೆಯಲ್ಲಿ ಸ್ಥಾನದ ಬಗ್ಗೆ ಅಹಂಕಾರ ಎಳ್ಳು ಕಾಳಿನಷ್ಟೂ ಇಲ್ಲ.

ಸ್ಥಾನದ ಪ್ರಭಾವ ಬದುಕಿನಲ್ಲಿ ಬೀಳಲು ಅವಕಾಶ ಕೊಟ್ಟಿಲ್ಲ. ಅವರ ಬಳಿ ಮಾತಾಡುವಾಗ ಸಭಾಧ್ಯಕ್ಷರು ಎಂಬ ಭಾವನೆ ಬರುವುದಿಲ್ಲ. ಸ್ನೇಹಿತರಂತೆ ಮಾತಾಡುತ್ತಾರೆ.

ಯಾವ ಕೆಲಸವನ್ನು ಅವರಿಗೆ ವಹಿಸಿಕೊಡುತ್ತಾರೋ, ಶಾಸಕ, ಮಂತ್ರಿ, ಕಾರ್ಯಕರ್ತ, ಸಭಾಪತಿ ಯಾವುದೇ ಜವಾಬ್ದಾರಿ ವಹಿಸಿದರೂ ಪ್ರಾಮಾಣಿಕವಾಗಿ ಬದ್ಧತೆಯಿಂದ ಕೆಲಸ ಮಾಡುವ ಸ್ವಭಾವ ಅವರದ್ದು.

ಶಿಕ್ಷಣ ಇಲಾಖೆ ನಡೆಸುವುದು ಸುಲಭವಲ್ಲ. ಆದರೆ ಅದನ್ನು ಅಚ್ಚುಕಟ್ಟಾಗಿ ಅದನ್ನು ನಿಭಾಯಿಸದರು. ಪಕ್ಕದಲ್ಲೇ ಹೊರಟ್ಟಿ ಇದ್ದಾರೆ. ಶಿಕ್ಷಣಕ್ಕೆ ಹೊಸ ದಿಕ್ಕು ಕೊಟ್ಟ ಇಬ್ಬರೂ ಇಲ್ಲೇ ಇರುವುದು ಕಾಕತಾಳೀಯ ಎಂದರು.

ಕಾಗೇರಿಯವರು ಸ್ಥಾನಕ್ಕೆ ನ್ಯಾಯವನ್ನು ಕೊಡಬೇಕು ಎಂಬ ಕಾರಣಕ್ಕೆ ಸಂವಿಧಾನದ ಬಗ್ಗೆ ದೊಡ್ಡ ಮಟ್ಟದಲ್ಲಿ ಚಿಂತನ ಮಂಥನ ಕಾರ್ಯಕ್ರಮವನ್ನು ವಿಧಾನಸಭೆಯಲ್ಲಿ ಮಾಡಿಸಿದರು.

ಕಾರ್ಯಾಂಗ ನ್ಯಾಯಾಂಗ ಶಾಸಕಾಂಗ ಪತ್ರಿಕಾರಂಗ ಎಲ್ಲ ರಂಗಗಳ ಕಾರ್ಯ ವಿಧಾನದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿ ಅದನ್ನು ಪಾರ್ಲಿಮೆಂಟ್‍ಗೆ ಕಳಿಸಿದರು.

ಚುನಾವಣೆಯಲ್ಲಿ ಬದಲಾವಣೆ ತರುವ ಬಗ್ಗೆ ಚರ್ಚೆ, ಒಂದು ದೇಶ ಒಂದು ಚುನಾವಣೆ ಪ್ರತಿಪಾದಿಸಿ ಅದರ ಬಗ್ಗೆಯೂ ಚರ್ಚೆ ಮಾಡಿಸಿದರು.

ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ ಜನಪ್ರತಿನಿಧಿಗಳ ಕರ್ತವ್ಯ, ನೀತಿ ಬಗ್ಗೆ ಚರ್ಚೆ ಮಾಡಿಸಿದರು. ತಮ್ಮ ಕರ್ತವ್ಯ ಬದ್ಧತೆಯಿಂದ ದಾಖಲೆಯ ಸಾಧನೆ ಮಾಡಿದ್ದಾರೆ. ಸಭಾಧ್ಯಕ್ಷರಾಗಿ ಇದನ್ನೆಲ್ಲ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಇದೆಲ್ಲದರ ಜತೆಗೆ ಮಾನವೀಯ ಗುಣಗಳು ಕಾಗೇರಿ ಅವರಿಗಿದೆ.

 

ದೇಶ ಮೊದಲು ಎಂಬ ವಿಚಾರ ಬಂದರೆ ಅದರ ಬಗ್ಗೆ ಗಟ್ಟಿಯಾಗಿ ನಿಂತವರು. ನೆಲ ಜಲ, ನಾಡಿನ ವಿಚಾರ ಬಂದಾಗ ಗಟ್ಟಿಯಾಗಿ ನಿಂತವರು.

ಬಡವರ ವಿಚಾರ , ಪ್ರವಾಹ ಸಂತ್ರಸ್ತರು, ಅರಣ್ಯವಾಸಿಗಳ ವಿಚಾರ ಬಂದಾಗ ಅವರಿಗೆ ನ್ಯಾಯ ಒದಗಿಸಲು ಪ್ರಭಾವ ಬೀರಿದವರು ಕಾಗೇರಿ. ಈ ಎಲ್ಲಾ ಗುಣಗಳೂ ಒಬ್ಬನೇ ಮನುಷ್ಯನಿಗೆ ಬರುವುದು ಸುಲಭದ ಮಾತಲ್ಲ. ಅದು ಅವರ ಜೀವನೋತ್ಸಾಹ ಎಂದರು.

ಇಷ್ಟೊಂದು ಸಾಧನೆ ಮಾಡಿದಮೇಲೆ ಶಿಖರಕ್ಕೆ ಹೋಗಲೇಬೇಕು. ಇಡೀ ಜಿಲ್ಲೆಯ ಶಾಸಕರು ಪ್ರೀತಿ ಇಟ್ಟಿದ್ದಾರೆ. ಹೆಬ್ಬಾರ ಅವರು ಬಂದಮೇಲೆ ಮತ್ತಷ್ಟು ಶಕ್ತಿ ಬಂದಿದೆ. ಅಭಿವೃದ್ಧಿ ವಿಚಾರದಲ್ಲಿ ಇಬ್ಬರೂ ಸಾಥ್ ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ 700-800 ಕೋಟಿ ರೂ. ಅನುದಾನ ಈಗಾಗಲೇ ಒದಗಿಸಲಾಗಿದೆ ಎಂದರು.

ಸಚಿವರಾದ ಶಿವರಾಮ ಹೆಬ್ಬಾರ, ಸಿಸಿ ಪಾಟೀಲ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಹಿರಿಯ ಮುಖಂಡ ಆರ್. ವಿ. ದೇಶಪಾಂಡೆ ಮೊದಲಾದವರು ಇದ್ದರು.

ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಖಚಿತ: ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button